Bhakar: ‘ದೇಶಕ್ಕಾಗಿ ಪದಕ ಗೆಲ್ಲಬಾರದಿತ್ತು’ – ಮನು ಭಾಕರ್ ಅಚ್ಚರಿ ಸ್ಟೇಟ್ಮೆಂಟ್ !!

Manu Bhakar: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಾಕರ್ ಅವರು ನಾನು ದೇಶಕ್ಕಾಗಿ ಪದಕಗಳನ್ನು ಗೆಲ್ಲಬಾರದು ಎಂದು ಅಚ್ಚರಿಯ ಹೇಳಿಕೆ ಎಂದನ್ನು ನೀಡಿದ್ದಾರೆ.

ಹೌದು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿ, ನ್ಯಾಷನಲ್ ಕ್ರಶ್ ಎನಿಸಿದವರು ಮನು ಭಾಕರ್ (Manu Bhaker). ಯಸ್, ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದ ಅವರು, ಒಲಿಂಪಿಕ್ಸ್‌ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದರ ಬೆನ್ನಲ್ಲೇ ಸಹ ಆಟಗಾರ ಸರಬ್ಜೋತ್ ಸಿಂಗ್ ಜೊತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಮತ್ತೊಂದು ಕಂಚಿನ ಪದಕ ಕೊರಳಿಗೇರಿಸಿದರು. ಭಾರತದ ಸ್ವಾತಂತ್ರ್ಯದ ನಂತರ ಒಲಿಂಪಿಕ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡೆರಡು ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಬಳಿಕ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗುವ ಕುರಿತು ಸಾಕಷ್ಟು ವಿವಾದಗಳನ್ನು ಸೃಷ್ಟಿಸಿಕೊಂಡರು. ಇದೀಗ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

ಭಾರತದ ಅಗ್ರ ಶೂಟರ್ ಮನು ಭಾಕರ್(Manu Bhaker) ಅವರ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಪರಿಗಣಿಸಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ದೇಶದ ಮೊದಲ ಆಟಗಾರ್ತಿ ಮನು ಭಾಕರ್ ತಮ್ಮ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವಕ್ಕೆ ಪರಿಗಣಿಸದಿದ್ದಕ್ಕಾಗಿ ನಿರಾಶೆಗೊಂಡಿದ್ದಾರೆ. ಈ ಬಗ್ಗೆ ಮನು ಭಾಕರ್​ ತಂದೆ ಕ್ರೀಡಾ ಸಚಿವಾಲಯ ಮತ್ತು ಖೇಲ್ ರತ್ನ ನಾಮನಿರ್ದೇಶಿತರ ಪಟ್ಟಿಯನ್ನು ಅಂತಿಮಗೊಳಿಸುವ ಸಮಿತಿಯ ಮೇಲೆ ಕಾಮೆಂಟ್ ಮಾಡಿದ್ದಾರೆ.

ಮನು ಭಾಕರ್ ಅವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಸಚಿವಾಲಯ ನೀಡಿರುವ ಕಾರಣವನ್ನು ಮನು ಅವರ ತಂದೆ ನಿರಾಕರಿಸಿದ್ದಾರೆ. ಮನುವನ್ನು ಶೂಟಿಂಗ್‌ನಂತಹ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತೇನೆ ಎಂದು ಅವರ ತಂದೆ ರಾಮ್ ಕಿಶನ್ ಹೇಳಿದ್ದಾರೆ. ಬದಲಾಗಿ ಮನುವನ್ನು ಕ್ರಿಕೆಟಿಗನನ್ನಾಗಿ ಮಾಡಬೇಕಿತ್ತು. ಶೂಟಿಂಗ್ ಕ್ರೀಡೆಯನ್ನು ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸಿದಕ್ಕಾಗಿ ನಾನು ವಿಷಾದಿಸುತ್ತೇನೆ. ಬದಲಿಗೆ ಮನುವನ್ನು ಕ್ರಿಕೆಟಿಗೆ ಸೇರಿಸಬೇಕಿತ್ತು, ಆಗ ಪ್ರಶಸ್ತಿ, ಪುರಸ್ಕಾರಗಳೆಲ್ಲ ಅವರ ಪಾಲಾಗುತ್ತಿದ್ದವು ಎಂದು ಹೇಳಿದ್ದಾರೆ.

ಅರ್ಜಿ ಸಲ್ಲಿಸದಿದ್ದರೂ ಪ್ರಶಸ್ತಿ ನೀಡುವ ಸಾಧ್ಯತೆ ಇದೆಯೇ?
ಒಂದು ವೇಳೆ ಯಾವುದೇ ಅಥ್ಲೀಟ್ ಪ್ರಶಸ್ತಿಗಾಗಿ ಹೆಸರು ನೋಂದಾಯಿಸಿಕೊಳ್ಳದಿದ್ದರೆ, ಆಯ್ಕೆ ಸಮಿತಿಯು ಕ್ರೀಡಾಪಟುವಿನ ಸಾಧನೆಗಳ ಆಧಾರದ ಮೇಲೆ ಸುಯೋ ಮೋಟೋ ಅರಿವನ್ನು ದಾಖಲಿಸಿಕೊಳ್ಳಬಹುದು. ಈ ಹಿಂದೆ ಭಾರತದ ವೇಗಿ ಮೊಹಮ್ಮದ್ ಶಮಿ ಕೂಡ ಅರ್ಜುನ ಪ್ರಶಸ್ತಿಗೆ ಅರ್ಜಿ ಸಲ್ಲಿಸಿರಲಿಲ್ಲ. ಆದರೆ ಬಿಸಿಸಿಐ ಕೋರಿಕೆಯ ಮೇರೆಗೆ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು.

Leave A Reply

Your email address will not be published.