Renukaswamy Murder Case: ಪರಪ್ಪನ ಅಗ್ರಹಾರದಿಂದ ನಗುನಗುತ್ತಲೇ ಹೊರಬಂದ ಆರೋಪಿ ಪವಿತ್ರ ಗೌಡ; ಎ13 ಆರೋಪಿ ಪ್ರದೂಷ್​ ಹೇಳಿದ್ದೇನು..?

Share the Article

Renukaswamy Murder Case; ಪರಪ್ಪನ ಅಗ್ರಹಾರ ಜೈಲಿನಿಂದ ಎ1 ಆರೋಪಿ ಪವಿತ್ರಾ ಗೌಡ ಇಂದು ಬೆಳಗ್ಗೆ ಬಿಡುಗಡೆ ಆಗಿದ್ದಾರೆ. ಜೈಲಿನಿಂದ ಹೊರಗೆ ಬರುತ್ತಿದ್ದಂತೆ ಪವಿತ್ರಾ ಗೌಡ ತಮ್ಮ ತಾಯಿಯನ್ನು ತಬ್ಬಿಕೊಂಡು ಭಾವುಕರಾಗಿದ್ದಾರೆ. ಬಿಡುಗಡೆ ಬೆನ್ನಲ್ಲೇ ಪವಿತ್ರಾ ಗೌಡ ನಗುನಗುತ್ತಲೇ ಹೊರ ಬಂದರು.

ಹೈಕೋರ್ಟ್‌ನಿಂದ ಬೇಲ್‌ ದೊರಕಿ ನಾಲ್ಕು ದಿನ ಕಳೆದರೂ ಪವಿತ್ರಾಗೆ ಬಿಡುಗಡೆ ಆಗಿರಲಿಲ್ಲ. ಇಂದು ಬೆಳಗ್ಗೆ ಬಿಡುಗಡೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಜೈಲಿನಿಂದ ರಿಲೀಸ್‌ ಆಗಿದ್ದಾರೆ.

ಮಗಳನ್ನು ಕರೆದುಕೊಂಡು ಹೋಗಲೆಂದು ಬಂದ ಪವಿತ್ರ ಗೌಡ ತಾಯಿ ಜೈಲಿನ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ಪೂಜೆ ಮಾಡಿದ್ದಾರೆ. ನಂತರ ಜೈಲಿನಿಂದ ಹೊರ ಬಂದ ಪವಿತ್ರಾ ಗೌಡ ತಮ್ಮ ತಾಯಿಯವರನ್ನು ತಬ್ಬಿ ಕಣ್ಣೀರು ಹಾಕಿದ್ದಾರೆ.

ಪವಿತ್ರಾ ಗೌಡ ಅವರನ್ನು ಜೂನ್‌ 11 ರಂದು ಪೊಲೀಸರು ಬಂಧನ ಮಾಡಿದ್ದು, ಜೂನ್‌, 20 ರಂದು ಜೈಲು ಸೇರಿದ್ದರು. ಬರೋಬ್ಬರಿ 6ತಿಂಗಳ ಬಳಿಕ ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆ ಆಗುತ್ತಿದ್ದಾರೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ 13 ನೇ ಆರೋಪಿ ಪ್ರದೂಷ್‌ ಕೂಡಾ ಜೈಲಿನಿಂದ ರಿಲೀಸ್‌ ಆಗಿದ್ದು, ಇಂದು ಬೆಳಗ್ಗೆ ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ರಿಲೀಸ್‌ ಆಗಿದ್ದಾರೆ.

ಜೈಲಿನಿಂದ ಹೊರಬರ್ತಿದ್ದಂತೆ ಮಾಧ್ಯಮದ ಜೊತೆ ಮಾತನಾಡಿದ ಪ್ರದೂಷ್‌, ಜೈಲಿನಿಂದ ಹೊರ ಬರ್ತಿರೋದಕ್ಕೆ ಖುಷಿ ಇದೆ. ಕಾನೂನಿನ ಮೇಲೆ ನನಗೆ ಗೌರವ ಇದೆ. ಪ್ರಕರಣದ ಕುರಿತು ಏನೂ ಕೇಳಬೇಡಿ. ನಾನು ಏನೂ ಹೇಳಲ್ಲ ಎನ್ನುತ್ತಾ ಕಾರು ಹತ್ತಿದ್ದಾರೆ.

Leave A Reply