Waqf: 150 ಕೋಟಿ ಆಫರ್‌ ಸುದ್ದಿ; ವಿಜಯೇಂದ್ರ ಮೇಲಿನ ಸಿದ್ದರಾಮಯ್ಯ ಆರೋಪ ಸುಳ್ಳು-ಅನ್ವರ್‌ ಮಾಣಿಪ್ಪಾಡಿ

Mangaluru: ವಕ್ಫ್‌ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ವಿಜಯೇಂದ್ರ ಅವರಿಗೆ 150 ಕೋಟಿ ಆಫರ್‌ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿರುವುದು ಇದು ಸುಳ್ಳು ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಸ್ಪಷ್ಟಪಡಿಸಿದ್ದಾರೆ.

ವಿಜಯೇಂದ್ರ ಅವರು ಯಾವುದೇ ರೀತಿಯ ಹಣದ ಬೇಡಿಕೆ ನೀಡಿಲ್ಲ. ಸರಕಾರ ತನಿಖೆ ಮಾಡಬೇಕೆಂದು ವಿಜಯೇಂದ್ರ ಅವರನ್ನು ಒತ್ತಾಯಿಸಿದ್ದೆ. ಆದರೆ ಹಣದ ಬೇಡಿಕೆ ಇಟ್ಟಿಲ್ಲ. ಈ ವರದಿಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಎಲ್ಲರ ವಿರುದ್ಧ ಕಿಡಿಕಾರಿದ್ದು ಸತ್ಯ. ಇದೀಗ ಸಿಎಂ ಸಿದ್ದರಾಮಯ್ಯನವರು ಹೇಳಿದ ರೀತಿಲಿ ಸಿಬಿಐಗೆ ವಹಿಸಲಿ. ಎಲ್ಲವೂ ಹೊರ ಬರುತ್ತದೆ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ವಕ್ಫ್‌ ವರದಿಯನ್ನು ಮುಚ್ಚಿ ಹಾಕಲು ನನಗೇ ಕಾಂಗ್ರೆಸ್‌ನವರು ಹಣದ ಆಮಿಷ ಹಾಕಿದ್ದರು. 2012ರಿಂದಲೂ ನನಗೆ ಆಫರ್‌ ನೀಡುತ್ತಾ ಬಂದಿದ್ದರು. ನಾನು ಬೈದು ಕಳುಹಿಸಿದ್ದೆ ಎಂದು ದೂರಿದ್ದಾರೆ. ನಮ್ಮ ವಕ್ಫ್ನ ಒಟ್ಟು ಆಸ್ತಿ 50 ಸಾವಿರ ಎಕರೆ ಇದ್ದಾಗ, ಅದರಲ್ಲಿ 27-28 ಸಾವಿರ ಎಕರೆ ಕಬಳಿಕೆ ಆಗಿ ಬಾಕಿ ಉಳಿದಿದ್ದು 23 ಸಾವಿರ ಎಕರೆ. ಆಗ ಸಿದ್ದರಾಮಯ್ಯ ಅವರು 1,60,000 ಎಕರೆಗೆ ನೋಟಿಸ್ ಕೊಡ್ತಾರೆ ಬೇರೆ ಬೇರೆ ರೈತರಿಗೆ. ಇದು ಯಾಕೆ? ಇದು ಮುಸ್ಲಿಂ ಮತ್ತು ಹಿಂದೂಗಳ ನಡುವೆ ಕಿಡಿ ಹೊತ್ತಿಸಿದ್ದು, ಅವರಿಬ್ಬರು ಹೊಡೆದಾಡಿಕೊಳ್ಳಲಿ ಅಂತಾ. ಅವರು ಅಷ್ಟು ಸತ್ಯವಂತರಾಗಿದ್ದರೆ ಒಮ್ಮೆ ನೋಟಿಸ್ ಕೊಟ್ಟವರು ಹಿಂದಕ್ಕೆ ಯಾಕೆ ಪಡೆದುಕೊಳ್ತಾರೆ? ಕೇವಲ 23-24 ಸಾವಿರ ಎಕರೆ ಇರಬೇಕಾದರೆ, 1,60,000 ಎಕರೆಗೆ ಹೇಗೆ ನೋಟಿಸ್ ಕೊಟ್ಟರು ಎಂದು ಮಾಣಿಪ್ಪಾಡಿ ಪ್ರಶ್ನಿಸಿದ್ದಾರೆ ಎಂದು ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ, ಆ ಸಮುದಾಯಕ್ಕೆ ಏನಾದರು ಮಾಡಬೇಕೆಂಬ ಮನಸ್ಸಿದರೆ ನಾನು ಕೊಟ್ಟ ವರದಿಯನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಲಿ ಎಂದು ಒತ್ತಾಯಿಸಿರುವ ಕುರಿತು ಮಾಧ್ಯಮ ವರದಿ ಮಾಡಿದೆ.

Leave A Reply

Your email address will not be published.