Pavitra Gowda: ಪವಿತ್ರ ಗೌಡಗೆ ಜಾಮೀನು ಸಿಗಲು ಕಾರಣವಾದ ಅಂಶಗಳೇನು? ವಕೀಲರು ಮಂಡಿಸಿದ ವಾದವೇನು?

Share the Article

Pavitra Gowda: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ (Darshan) ಹಾಗೂ ಪವಿತ್ರಾ ಗೌಡ (Pavithra Gowda) ಸೇರಿದಂತೆ 7 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ದರ್ಶನ್ ಗೆ ಜಾಮೀನು ಸಿಕ್ಕರೂ ಪರವಾಗಿಲ್ಲ ಆದರೆ ಪವಿತ್ರ ಗೌಡರಿಗೆ ಜಾಮೀನು ಸಿಗಬಾರದು ಎಂಬುದು ನಾಡಿನ ಹಲವರ ಬೇಡಿಕೆಯಾಗಿತ್ತು. ಯಾಕೆಂದರೆ ಈ ಇಡೀ ಕಥಾಪ್ರಸಂಗಕ್ಕೆ ಮೂಲಸೂತ್ರಧಾರಿ ಈ ಮಾಯಂಗಿಯೇ. ಆದರೇನು ಮಾಡೋದು ಆಕೆಯು ಕೂಡ ನಿನ್ನೆ ಜಾಮೀನು ಸಿಕ್ಕಿದೆ. ಹಾಗಿದ್ದರೆ ಪವಿತ್ರ ಗೌಡರಿಗೆ ಜಾಮೀನು ಸಿಗಲು ಕಾರಣವಾದ ಅಂಶಗಳು ಯಾವುವು? ಆಕೆಯ ಪರ ಲಾಯರ್ ಏನೆಲ್ಲ ವಾದ ಮಂಡಿಸಿದರು? ಇಲ್ಲಿದೆ ನೋಡಿ ಡಿಟೇಲ್ಸ್.

ಪವಿತ್ರಾ ಗೌಡ ಕಳೆದ ಆರು ತಿಂಗಳಿಂದಲೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಪವಿತ್ರಾ ಗೌಡ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಿದ ವಕೀಲರ ತಂಡದ ಸದಸ್ಯೆ ಶಿಲ್ಪಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪವಿತ್ರಳಿಗೆ ಜಾಮೀನು ಸಿಗಲು ಕಾರಣವಾದ ಅಂಶಗಳ ಬಗ್ಗೆ ತಿಳಿಸಿದ್ದಾರೆ.

‘ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲರಾದ ಸೆಬಾಸ್ಟಿಯನ್ ಅವರು ವಾದ ಮಂಡಿಸಿದ್ದರು. ವಾದದ ವೇಳೆ ಪವಿತ್ರಾ ಗೌಡ ಸಿಂಗಲ್ ಪೇರೆಂಟ್, ಆಕೆ ಒಬ್ಬ ಮಹಿಳೆ ಎಂಬುದರ ಜೊತೆಗೆ ಪ್ರಕರಣದಲ್ಲಿ ಅವರ ಪಾತ್ರ ಇರಲಿಲ್ಲವೆಂದು. ಅಪಹರಣಕ್ಕಾಗಲಿ ಕೊಲೆಗಾಗಲಿ ಅವರು ಕುಮ್ಮಕ್ಕು ನೀಡಿರಲಿಲ್ಲ ಎಂದು ವಾದಿಸಿದ್ದರು. ಇಂದು ಟಿವಿ9 ಜೊತೆ ಮಾತನಾಡಿದ ವಕೀಲೆ ಶಿಲ್ಪಾ, ‘ಪವಿತ್ರಾ ಅವರು ಸಿಂಗಲ್ ಪೇರೆಂಟ್ ಅಥವಾ ಮಹಿಳೆ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಿಲ್ಲ, ಬದಲಿಗೆ ಈ ಪ್ರಕರಣದಲ್ಲಿ ಅವರ ಪಾತ್ರ ಇಲ್ಲ ಎಂಬ ಕಾರಣಕ್ಕೆ ಅವರಿಗೆ ಜಾಮೀನು ನೀಡಿದೆ’ ಎಂದಿದ್ದಾರೆ.

Leave A Reply