Preetam: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತಕ್ಕೆ ಬಲಿ!!

Share the Article

Karkala: ರಾಜ್ಯಮಟ್ಟದ ಖ್ಯಾತ ಕಬಡ್ಡಿ ಆಟಗಾರ, ಕಾರ್ಕಳದ ಪ್ರೀತಂ ಶೆಟ್ಟಿ(26) ಅವರು ಶುಕ್ರವಾರ(ಡಿ.13) ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಹೌದು, ಉಡುಪಿ ಜಿಲ್ಲೆಯ ಕಾರ್ಕಳ(Karkala) ತಾಲೂಕಿನ ಮುಟ್ಲುಪಾಡಿ,‌ ನಡುಮನೆ ನಿವಾಸಿ ಪ್ರೀತಂ‌(Preetam)ಅವರು ಶುಕ್ರವಾರ ಮಂಡ್ಯಾದಲ್ಲಿ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಆದ್ರೆ ಆಟವಾಡುತ್ತಿರುವಾಗ‌ಲೇ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಪ್ರತಿಭಾನ್ವಿತ ಪ್ರೀತಂ ಅವರು ಶಿಕ್ಷಣ ಹಾಗೂ ಕ್ರೀಡೆ ಎರಡರಲ್ಲಿಯೂ ಆಸಕ್ತಿ ಹೊಂದಿದ್ದು, ಹಂತಹಂತವಾಗಿ‌ ಶ್ರಮವಹಿಸಿ ಕಬಡ್ಡಿ ಆಟಗಾರನಾಗಿ ಖ್ಯಾತಿ ಪಡೆದಿದ್ದರು. ಅವರು ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

Leave A Reply

Your email address will not be published.