Andra Pradesh: ಸನ್ಯಾಸಿನಿಯಾಗಲು ಟ್ರೈನಿಂಗ್ ಪಡೆಯುತ್ತಿದ್ದ ಹುಡುಗಿ ಪ್ರೆಗ್ನೆಂಟ್ – ಮಗು ಜನನ !!

Share the Article

Andra Pradesh: ಸನ್ಯಾಸಿನಿಯಾಗಲು ತರಬೇತಿ ಪಡೆಯುತ್ತಿರುವ ಅಪ್ರಾಪ್ತ ಹುಡುಗಿಯೊಬ್ಬಳು ಮಗುವಿಗೆ ಜನ್ಮ ನೀಡಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹೌದು, ಆಂಧ್ರಪ್ರದೇಶದ(Andra Pradesh) ನಂದ್ಯಾಲ್ ಜಿಲ್ಲೆಯವಳು ಮತ್ತು ಸೇಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿರುವ ಕ್ರಿಶ್ಚಿಯನ್ ಹುಡುಗಿಯೊಬ್ಬಳು ಸನ್ಯಾಸಿನಿಯಾಗಲು ತರಬೇತಿ ಪಡೆಯುತ್ತಿದ್ದಳು. ಆದ್ರೆ ಸನ್ಯಾಸಿನಿ ತರಬೇತಿ ಪಡೆಯುತ್ತಿರುವ ಈಕೆ ಮಗುವಿಗೆ ಜನ್ಮ ನೀಡಿ ನಂತರ ಮಗುವನ್ನು ಕೊಂದಿದ್ದಾಳೆ.

8 ಡಿಸೆಂಬರ್ 2024 ರಂದು, ಅವಳು ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಕ್ಷಣವೇ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದು ಅದನ್ನು ಕೊಂದಿದ್ದಾಳೆ. ಹಾಸ್ಟೆಲ್ ಅನ್ನು ಚರ್ಚ್-ಆಡಳಿತ ಸಂಸ್ಥೆ ಏಲೂರಿನ ‘ಡಯೋಸಿಸನ್’ ನಡೆಸುತ್ತಿದ್ದ, ಯುವತಿಯೊಂದಿಗೆ ಸಂಬಂಧ ಹೊಂದಿದ್ದ ಪ್ರಶಿಕ್ಷಣಾರ್ಥಿ ಪ್ರೀಸ್ಟ್‌ ನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

Leave A Reply