Harish Poonja: ‘ಈ ಒಂದು ಕಾಡು ಪ್ರಾಣಿ ಕೊಲ್ಲಲು ನಮಗೆ ಅನುಮತಿ ಕೊಡಿ’- ವಿಧಾನಸಭೆಯಲ್ಲಿ MLA ಹರೀಶ್ ಪೂಂಜಾ ಅಬ್ಬರ.. ! ಶಾಸಕರ ಈ ಬೇಡಿಕೆ ನಿಜಕ್ಕೂ ದುರಾದೃಷ್ಟಕರ ಎಂದ ಅರಣ್ಯ ಸಚಿವ

Harish Poonja: ಆನೆಗಳಿಂದ ಕಾಡಿನಂಚಿನ ಜನರಿಗೆ ತೊಂದರೆ ಆಗುತ್ತಿದೆ. ಸರ್ಕಾರ ಈ ದಾಳಿ ತಡೆಯಲಿ ಇಲ್ಲಾ ರೈತರಿಗೆ ಕೋವಿ ಪಡೆಯಲು ಪರವಾನಗಿ ನೀಡಿ, ಆನೆಗಳನ್ನು ಕೊಲ್ಲಲು ಅನುಮತಿ ನೀಡಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಬೆಳಗಾವಿ ಅಧಿವೇಶನದಲ್ಲಿ ಅಬ್ಬರಿಸಿದ್ದಾರೆ.

ಹೌದು, ಬೆಳಗಾವಿಯ ಸುವರ್ಣ ಸೌಧದಲ್ಲಿ (Suvarna Soudha) ಚಳಿಗಾಲದ ಅಧಿವೇಶನ (Winter Session) ನಡೆಯುತ್ತಿದೆ. ಇಂದು ಎರಡನೇ ದಿನದ ಕಲಾಪ ಜರುಗಿದ್ದು ಈ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish Poonja) ಅವರು ಆನೆ ಹಾವಳಿಯ ತಡೆಗಟ್ಟುವ ಕುರಿತು ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿದ್ದು,ಸರ್ಕಾರ ಆನೆ (Elephant) ಹಾವಳಿ ತಡೆಗಟ್ಟಬೇಕು ಇಲ್ಲವಾದರೆ ಅವುಗಳನ್ನು ಕೊಲ್ಲಲು ನಮಗೆ ಅವಕಾಶ ಕೊಡಿ ಎಂದು ಕಲಾಪದಲ್ಲಿ ಆಗ್ರಹಿಸಿದ್ದಾರೆ. ಇದಕ್ಕೆ ಅರಣ್ಯ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂಂಜಾ ಹೇಳಿದ್ದೇನು?
”ಗ್ರಾಮೀಣ ಪ್ರದೇಶದ ಜನರು ಆನೆ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಅರಣ್ಯ ಇಲಾಖೆಗೆ ಕರೆ ಮಾಡಿದರೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ‘ಅಂಗಡಿಯಿಂದ ಪಟಾಕಿ ತಂದು ಸಿಡಿಸಿ, ಆನೆ ಓಡಿಸ್ತೀವಿ’ ಎನ್ನುತ್ತಾರೆ. ಇದು ವಾಸ್ತವವಾಗಿ ನಡೆಯುತ್ತಿದೆ. ನಾನು ಮನವಿ ಮಾಡುತ್ತೇನೆ, ನಿಮಗೆ ಇದನ್ನು ಪರಿಹಾರ ಮಾಡಲು ಸಾಧ್ಯವಿಲ್ಲ. ಹೀಗಾಗಿ ರೈತರ ಕೋವಿಗಳಿಗೆ ಅವಕಾಶ ಮಾಡಿ ಕೊಡಿ. ನೀವು ಹೇಗೂ ಕೊಲೆ ಮಾಡುತ್ತಾ ಇದ್ದೀರಿ. ರೈತರಿಗೂ ಅವಕಾಶ ಮಾಡಿಕೊಡಿ. ನಾವು ಗುಂಡಿಟ್ಟು ಸಾಯಿಸುತ್ತೇವೆ ಅದನ್ನು. ಆ ಪರಿಸ್ಥಿತಿಯಲ್ಲಿ ರೈತರು ಇವತ್ತು ಇದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಶಾಸಕ ಹರೀಶ್ ಪೂಂಜ ಸದನದಲ್ಲಿ ಹೇಳಿದರು.

ಇದಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಉತ್ತರಿಸಿದ್ದು, ಶಾಸಕರು ಜವಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ, ವನ್ಯಜೀವಿ ಕೊಲ್ಲುವ ಮಾತು ಅತ್ಯಂತ ದುರದೃಷ್ಟಕರ ಸಂಗತಿ ಎಂದು ವಿಷಾದ ವ್ಯಾಕಪಡಿಸಿದ್ದಾರೆ.

Leave A Reply

Your email address will not be published.