Belthangady : ಕೊಟ್ಟ ಹಣವನ್ನು ಮರಳಿ ಕೇಳಲು ಹೋದಾಗ ತಲ್ವಾರ್ ನಿಂದ ದಾಳಿ – ಹಣ ಕೊಟ್ಟವನ ತಲೆ ಕಡಿದ ಆರೋಪಿ!!

Belthangady : ಕೊಟ್ಟ ಹಣವನ್ನು ಮರಳಿ ಕೇಳಲು ಹೋದಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಲವಾರ್ ನಿಂದ ದಾಳಿ ಮಾಡಿದಂತಹ ಪ್ರಕರಣ ಬೆಳತಂಗಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಹೌದು, ಪಡಂಗಡಿ(Padangady) ನಿವಾಸಿ ದಾವೂದ್ ಅವರು ಬೆಳ್ತಂಗಡಿ(Belthangady) ತಾಲೂಕಿನ ತೆಂಕ ಕಾರಂದೂರು ಕಟ್ಟೆಯ ಇಕ್ಬಾಲ್‌ಗೆ 50 ಸಾ. ರೂ. ನೀಡಿದ್ದು, ಅದನ್ನು ವಾಪಸ್ ನೀಡುವಂತೆ ಕೇಳಲು ಡಿ.11ರಂದು ಸ್ನೇಹಿತರೊಂದಿಗೆ ಇಕ್ಬಾಲ್‌ನ ಮನೆಗೆ ಹೋಗಿದ್ದರು. ಈ ವೇಳೆ ಮನೆಯಿಂದ ತಲವಾರಿನೊಂದಿಗೆ ಹೊರ ಬಂದ ಆರೋಪಿ ದಾವೂದ್‌ನ ತಲೆಗೆ ಕಡಿದಿರುವುದಾಗಿ ಆರೋಪಿಸಲಾಗಿದೆ. ಘಟನೆ ಸಂಬಂಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.