Allu Arjun Arrest: ಅಲ್ಲು ಅರ್ಜುನ್‌ಗೆ ಜೈಲುವಾಸ; ಪೊಲೀಸರ ಹೇಳಿಕೆ ಇಲ್ಲಿದೆ

Allu Arjun Arrest: ನಟ ಅಲ್ಲು ಅರ್ಜುನ್ ಅನ್ನು ಹೈದರಾಬಾದ್ ಚೀಕಡಪಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ. ಡಿ.4 ರಂದು ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಪ್ರಕರಣಕದಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟನ ಬಂಧನ ವಾಗಿದ್ದು, ಸ್ಟೇಷನ್ ಬೇಲ್ ಮೇಲೆ ನಟನನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ.
ಈ ಕುರಿತು ಹೈದರಾಬಾದ್ ಸಿಪಿ ಸಿವಿ ಆನಂದ್ ಅವರು ʼಚಿಕ್ಕಡಪಲ್ಲಿ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧನ ಮಾಡಲಾಗಿದ್ದು, ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ಬಂದಿದ್ದು, ಈ ಸಂದರ್ಭದಲ್ಲು ನೂಕು ನುಗ್ಗಲು ಉಂಟಾಗಿ ಮಹಿಳೆಯ ಸಾವಾಗಿದೆ. ಇದೀಗ ಉಸ್ಮಾನಿಯಾ ಆಸ್ಪತ್ರೆಯಲ್ಲಿ ಅಲ್ಲು ಅರ್ಜುನ್‌ಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ನಾಂಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆʼ ಎಂದು ಹೇಳಿದ್ದಾರೆ.
ಈ ಮೂಲಕ ಅಲ್ಲು ಅರ್ಜುನ್‌ಗೆ ಸ್ಟೇಷನ್ ಬೇಲ್ ಇರುವುದಿಲ್ಲ. ನ್ಯಾಯಾಂಗ ಬಂಧನವಿರಲಿದೆ ಎಂದು ಪೊಲೀಸರು ಖಾತ್ರಿಪಡಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಹದಿನಾಲ್ಕು ದಿನಗಳ ಜೈಲು ವಾಸ ಇರುತ್ತದೆ. ನಂತರ ಜಾಮೀನಿಗೆ ಪ್ರಯತ್ನ ಮಾಡಬೇಕು. ಕೆಲವು ಪ್ರಕರಣದಲ್ಲಿ ಒಂದೇ ದಿನದಲ್ಲಿ ಜಾಮೀನು ದೊರೆಯುವ ಸಾಧ್ಯತೆ ಕೂಡಾ ಇರುತ್ತದೆ. ಈ ಪ್ರಕರಣದಲ್ಲಿ ಏನಾಗಲಿದೆ? ಎನ್ನುವುದು ಸಂಜೆ ತಿಳಿದು ಬರಲಿದೆ.