Murudeshwara : 4 ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಪ್ರಕರಣ – ‘ನಾಲ್ಕಲ್ಲ 15 ಜನರು ಮುಳುಗಿ ಹೋಗುತ್ತಿದ್ದೆವು’ ಎಂದು ರೋಚಕ ಸತ್ಯ ಬಿಚ್ಚಿಟ್ಟ ವಿದ್ಯಾರ್ಥಿನಿ!

Murudeshwara : ಕಳೆದ ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ(Murudeshwara) ಬೀಚ್ನಲ್ಲಿ ಕೋಲಾರ ಶಾಲೆಯಿಂದ ಪ್ರವಾಸ ಬಂದಿದ್ದ ಶಾಲಾ ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಕಾರ್ಯಾಚರಣೆ ಬಳಿಕ ವಿದ್ಯಾರ್ಥಿನಿಯರ ಮೃತ ದೇಹ ಹೊರತೆಗೆಯಲಾಗಿತ್ತು. ನಂತರ ಉಳಿದ ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ಕೋಲಾರಕ್ಕೆ ಕಳುಹಿಸಿಕೊಡಲಾಗಿದೆ.
ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಅದರಲ್ಲಿ ಬದುಕುಳಿದು ಬಂದಂತಹ ವಿದ್ಯಾರ್ಥಿನಿಯಾದ ಪಲ್ಲವಿ ಅಚ್ಚರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅದೇನೆಂದರೆ ಸಮುದ್ರದ ಅಲೆಗಳ ಹೊಡೆತಕ್ಕೆ ನಾವು ನಾಲ್ಕಲ್ಲ 15 ಜನರು ಮುಳುಗಿ ಹೋಗಿ ಸಾಯುತ್ತಿದ್ದೆವು ಎಂದು ಕಣ್ಣೆದುರಿಗೆ ನಡೆದ ನೈಜ ಘಟನೆ ವಿವರಿಸಿದ್ದಾಳೆ. ಮಾಧ್ಯಮಗಳೊಂದಿಗೆ ಮಾತನಾಡಿದ ಆಕೆ, ದೊಡ್ಡ ದೊಡ್ಡ ಅಲೆಗಳಿಗೆ 15 ಜನರು ಸಮುದ್ರದ ಅಲೆಗಳ ಮಧ್ಯ ಸಿಲುಕಿಕೊಂಡಿದ್ದರು. ಈ ವೇಳೆ ನಾವು ನಾಲ್ವರು ಅಲ್ಲ ಸುಮಾರು 15 ಜನರು ಸಿಲುಕಿಕೊಂಡಿದ್ದೆವು. ಕೂಡಲೇ ಅಲ್ಲಿದ್ದ ಸ್ಥಳೀಯ ಲೈಫ್ ಗಾರ್ಡ್ಸ್ ಸಿಬ್ಬಂದಿ ಹಾಗೂ ಶಿಕ್ಷಕರು ಉಳಿದವರನ್ನು ಕಾಪಾಡಿದರು ಆದರೆ ನಾಲ್ವರು ಮಾತ್ರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾಳೆ.