Bengaluru:ಯತ್ನಾಳ್​​ & ಟೀಂಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್​ – ರೆಬಲ್ ನಾಯಕರಿಗೆ ವರಿಷ್ಟರಿಂದ ಡೆಡ್​​​​​ಲೈನ್​​!!

Bengaluru: ಬಿಜೆಪಿ ರಾಜ್ಯ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್​ ಖಡಕ್ ಆಗಿ ಉತ್ತರಿಸಿದ್ದಾರೆ. ಇದರಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ಧ ರೆಬಲ್​​ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ & ಟೀಂಗೆ ಬಿಗ್ ಶಾಕ್ ಸಿಕ್ಕಂತಾಗಿದೆ.

ಹೌದು, ಈಗಾಗಲೇ ರಾಜ್ಯ ಬಿಜೆಪಿ ಕಚೇರಿಯಲ್ಲಿ (Bengaluru) ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್​ ಅವರು, ಯತ್ನಾಳ್ ಅವರ​​ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಪಕ್ಷದ ನಾಯಕತ್ವದ ವಿಚಾರವಾಗಿ ಯತ್ನಾಳ್​​​ ಅವರ ನಡೆ-ನುಡಿಗೆ ಸಂಬಂಧಿಸಿ ಶೋಕಾಸ್​​​ ನೋಟಿಸ್​ ನೀಡಿದ್ದೇವೆ. ಅದಕ್ಕೆ ಉತ್ತರ ಬಂದ ನಂತರ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಯತ್ನಾಳ್​​​​ & ಟೀಂಗೆ ಸಂದೇಶವನ್ನು ನೀಡಿದ್ದಾರೆ.

ಇನ್ನು ರಾಜ್ಯ ಬಿಜೆಪಿಯ ನಾಯಕತ್ವದ ಬದಲಾವಣೆ ಆಗ್ರಹಕ್ಕೆ ರಾಧಾಮೋಹನ್ ಅವರು ಕಿಡಿಕಾರಿದ್ದು, ಯಾವುದೇ ಕಾರಣಕ್ಕೂ ವಿಜಯೇಂದ್ರ ಅವರ ಬದಲಾವಣೆ ಎಂಬ ಮಾತೇ ಇಲ್ಲ. ಯಾರು ಉತ್ತಮರೋ ಅವರೇ ನಾಯಕರಾಗಿ ಇರುತ್ತಾರೆ. ಪ್ರಸ್ತುತ ವಿಜಯೇಂದ್ರ ಅವರ ನಾಯಕತ್ವ ಸೂಕ್ತವಾಗಿದೆ ಎಂದು ವಿಜಯೇಂದ್ರ ಪರ ಹೈಕಮಾಂಡ್ ಉತ್ತರ ನೀಡಿದೆ.

Leave A Reply

Your email address will not be published.