Kalaburagi: ಮೆಡಿಕಲ್ ಸೀಟ್ ಸಿಗದ ಕಾರಣ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ !!

Kalaburagi: ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ತಾವು ಉತ್ತೀರ್ಣರಾಗಲಿಲ್ಲ ಎಂದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳು ಪ್ರತಿವರ್ಷವೂ ಬೆಳಕಿಗೆ ಬರುತ್ತಿರುತ್ತವೆ. ಅಲ್ಲದೆ ಅದರ ಮುಂದುವರಿದ ಭಾಗವಾಗಿ ತಾವು ಇಷ್ಟಪಡುವಂತಹ ಎಂಬಿಬಿಎಸ್, ಇಂಜಿನಿಯರಿಂಗ್ ಸೀಟ್ ಗಳು ಕೂಡ ತಮಗೆ ದೊರಕಲಿಲ್ಲ ಎಂದು ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುವಂತಹ ಕೆಲವು ಘಟನೆಗಳನ್ನು ನಾವು ನೋಡಬಹುದು. ಇದೀಗ ಅಂತದೇ ಅವಮಾನಕರ ಘಟನೆ ಒಂದು ಕಲಬುರಗಿಯಲ್ಲಿ ನಡೆದಿದೆ.

 

ಹೌದು, ಕಲಬುರಗಿಯ(Kalaburagi) ವಿದ್ಯಾರ್ಥಿನಿ ತನುಜಾ ಡಾಕ್ಟರ್ ಆಗಬೇಕೆಂಬ ಕನಸು ಕಂಡಿದ್ದಳು. ಆದ್ರೆ, ಸಿಇಟಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ಎರಡು ಬಾರಿ ಪ್ರಯತ್ನ ಪಟ್ಟರೂ ಎರಡು ಬಾರಿಯೂ ಸಹ ಎಂಬಿಬಿಎಸ್​ ಸೀಟು ದೊರೆತಿರಲಿಲ್ಲ. ಹೀಗಾಗಿ ಎಂಬಿಬಿಎಸ್​ ಓದಿ ಡಾಕ್ಟರ್ ಆಗಬೇಕು ಎಂಬ ಆಶಯ ಹೊಂದಿದ್ದ ತನುಜಾಳು ತನ್ನ ಕನಸು ನನಸಾಗಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡ ಮನನೊಂದು ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ಚಲಿಸುವ ರೈಲಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ರೈಲಿನಲ್ಲಿ ಅನಂತಪುರ ಜಿಲ್ಲೆಯ ರಾಯದುರ್ಗದ ಸಮೀಪ ಚಲಿಸುವ ರೈಲಿನಿಂದ ಜಿಗಿದು ಆತ್ಮ ಹತ್ಯೆಗೆ ಶರಣಾಗಿದ್ದಾಳೆ. ಮೊದಲಿಗೆ ವಿದ್ಯಾರ್ಥಿನಿ ಆಕಸ್ಮಿಕವಾಗಿ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಅಂದಾಜಿಸಲಾಗಿತ್ತು. ಆದ್ರೆ, ಸಾಯುವ ಮುನ್ನ ತನುಜಾ ಪೋಷಕರಿಗೆ ದೂರವಾಣಿ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ.

Leave A Reply

Your email address will not be published.