Belagavi: ರಾಜ್ಯ ಮಹಿಳಾ ಹೋರಾಟಗಾರ್ತಿಗೆ ‘ಲವ್ ಸೆಕ್ಸ್’ ದೋಖಾ!! ಮಾಡಿದ್ದು ಯೋಧ? ಮನೆ ಮುಂದೆ ಪ್ರತಿಭಟನೆ

Belgavi: ಓರ್ವ ಯೋಧನ ವಿರುದ್ಧ ರಾಜ್ಯ ಮಹಿಳಾ ಹೋರಾಟಗಾರ್ತಿ ಲವ್, ಸೆಕ್ಸ್ ಮತ್ತು ದೋಖಾ ಆರೋಪ ಮಾಡಿದ್ದಾರೆ. ಅಲ್ಲದೆ ನ್ಯಾಯಕ್ಕಾಗಿ ಯೋಧನ ಮನೆ ಮುಂದೆ ಹೋರಾಟಗಾರ್ತಿ ಧರಣಿ ಮಾಡಿದ್ದಾರೆ.

 

ಹೌದು, ಬೆಳಗಾವಿ(Belgavi) ನಗರದ ಮಚ್ಚೆ ಗ್ರಾಮದ ನಿವಾಸಿ ಹೋರಾಟಗಾರ್ತಿ ಪ್ರಮೋದಾ ಹಜಾರೆ, ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್ ನಲವಡೆ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಅಲ್ಲದೆ ನ್ಯಾಯಕ್ಕಾಗಿ ಯೋಧನ ಮನೆಯ ಮುಂದೆ ಪ್ರಮೋದ ಹಜಾರೆ ಪ್ರತಿಭಟನೆ ಮಾಡುತ್ತಿದ್ದಾರೆ. ಮದುವೆಯಾಗುವುದಾಗಿ ಯೋಧ ಅಕ್ಷಯ್ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಬೀಜಗರ್ಣಿ ಗ್ರಾಮದ ಅಕ್ಷಯ್ ನಲವಡೆ ವಿರುದ್ಧ ಇದೀಗ ವಂಚನೆ ಆರೋಪ ಕೇಳಿ ಬಂದಿದೆ.

ಆಗಿದ್ದೇನು..?:
ಪ್ರಮೋದಾ ಹಜಾರೆಗೆ 6 ವರ್ಷದ ಹಿಂದೆ ಫೇಸ್ಬುಕ್​ನಲ್ಲಿ ಅಕ್ಷಯ್ ನಲವಡೆ ಪರಿಚಯವಾಗಿದ್ದ. ತನಗಿಂತ 14 ವರ್ಷ ಮೇಲ್ಪಟ್ಟ ಮಹಿಳೆ ಜೊತೆಗೆ ಪ್ರೀತಿ ಮಾಡಿದ್ದು, ಬಳಿಕ ಮನೆಯ ದೇವರ ಕೋಣೆ ಮುಂದೆ ಪ್ರಮೋದಾ ಮತ್ತು ಅಕ್ಷಯ್ ಮದುವೆಯಾಗಿದ್ದರು. ಬಳಿಕ ಆತ ಸೇನೆಯಿಂದ ರಜೆಗೆ ಬಂದಾಗ 15 ದಿನಗಳ ಕಾಲ ಪ್ರಮೋದಾ ಬಳಿ ಉಳಿದುಕೊಳ್ಳುತ್ತಿದ್ದ.

ಇದೇ ವೇಳೆ ಅಕ್ಷಯ್​ಗೆ 9 ಯುವತಿಯರ ಜೊತೆಗೆ ನಂಟಿರುವುದು ಬೆಳಕಿಗೆ ಬಂದಿದೆ. ಅದನ್ನು ಪ್ರಶ್ನೆ ಮಾಡಿದ ಬಳಿಕ ಎಲ್ಲರನ್ನೂ ಬಿಟ್ಟು ಜೊತೆಗೆ ಇರುವುದಾಗಿ ಅಕ್ಷಯ್ ಹೇಳಿದ್ದ. ಆದರೆ ಇದೀಗ ಅಕ್ಷಯ್ ಬೇರೊಬ್ಬ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಈ ವಿಚಾರ ಗೊತ್ತಾಗಿ ಪ್ರಮೋದಾ ಅಕ್ಷಯ್ ಮನೆಗೆ ಹೋಗಿದ್ದರು. ಹಿರಿಯರು, ಕುಟುಂಬಸ್ಥರು ಕೂಡಿಕೊಂಡು ಸರಿಪಡಿಸುವುದಾಗಿ ಹೇಳಿ ಕಳಿಸಿದ್ದರು.

ಆದರೆ ಇಂದು ಅಕ್ಷಯ್ ಮದುವೆಯಾಗಿದ್ದಾನೆ ಎಂದು ಪ್ರಮೋದ ಅಕ್ಷಯ್ ಮನೆಗೆ ತೆರಳಿದ್ದಾರೆ. ಮನೆಗೆ ಬೀಗ ಹಾಕಿ ಅಕ್ಷಯ್ ನಲವಡೆ ಮತ್ತು ಕುಟುಂಬಸ್ಥರು ತೆರಳಿದ್ದಾರೆ. ಸಾಯುವವರೆಗೂ ಯೋಧನ ಮನೆಯ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಯೋಧ ಅಕ್ಷಯ್ ಮನೆಯ ಎದುರು ಪ್ರಮೋದ ಕಣ್ಣೀರಿಡುತ್ತಾ ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಸಾಕಷ್ಟು ಮಹಿಳೆಯರ ಪರ ಹೋರಾಡಿ ನ್ಯಾಯ ಕೊಡಿಸಿದ್ದೇನೆ. ಇಂದು ನನ್ನ ನೆರವಿಗೆ ಬರುವಂತೆ ಪ್ರಮೋದ ಹಜಾರೆಯವರು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ಸದ್ಯ ಪ್ರಮೋದಾ ಅವರು, ಸಾಕಷ್ಟು ಮಹಿಳೆಯರಿಗೆ ನ್ಯಾಯ ಕೊಡಿಸಿದ್ದೇನೆ ತನ್ನ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.

Leave A Reply

Your email address will not be published.