Madhya pradesh: ತಮ್ಮ ಪಕ್ಷದ ಮಾಜಿ ಶಾಸಕನನ್ನು ಹಿಡಿದು ಮನಬಂದಂತೆ ಥಳಿಸಿದ BJP ಕಾರ್ಯಕರ್ತರು !! ವಿಡಿಯೋ ವೈರಲ್​

Madhya pradesh: ಬಿಜೆಪಿ ಪಕ್ಷದ ಮಾಜಿ ಶಾಸಕ (BJP Ex MLA), ರಾಜ್ಯ ಘಟಕದ ಉಪಾಧ್ಯಕ್ಷ ಬಹದ್ದೂರ್​ ಸಿಂಗ್ ಚೌಹಾಣ್​​ನನ್ನು ಕಾರ್ಯಕರ್ತರು ವೇದಿಕೆಯಲ್ಲೇ ಥಳಿಸಿರುವ ಘಟನೆ ನಡೆದಿದೆ.

ಹೌದು, ಮಧ್ಯಪ್ರದೇಶದ(Madhyapradesh)ಭೋಪಾಲ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಏನೆಂದರೆ ಬಿಜೆಪಿ ಪಕ್ಷದ ಮಾಜಿ ಶಾಸಕ (BJP Ex MLA), ರಾಜ್ಯ ಘಟಕದ ಉಪಾಧ್ಯಕ್ಷ ಬಹದ್ದೂರ್​ ಸಿಂಗ್ ಚೌಹಾಣ್​​ನನ್ನು ಕಾರ್ಯಕರ್ತರು ವೇದಿಕೆಯಲ್ಲೇ ಥಳಿಸಿರುವ ಘಟನೆ ನಡೆದಿದೆ. ಘಟನೆಯೂ ಮಧ್ಯಪ್ರದೇಶದ ಮಹಿದ್​ಪುರದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಂದಹಾಗೆ ದೊರೆತ ಮಾಹಿತಿ ಪ್ರಕಾರ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಮಾಜಿ ಶಾಸಕ ಬಹದ್ದೂರ್​ ಸಿಂಗ್​ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆ ಬಳಿಕ ವೇದಿಕೆಯನ್ನು ಬಲವಂತವಾಗಿ ಪ್ರವೇಶಿಸಿದ್ದಾರೆ. ಈ ರೀತಿಯಾಗುತ್ತಿರುವುದು ಇದೇ ಮೊದಲಲ್ಲ. ಮಾಜಿ ಶಾಸಕನ ವಿರುದ್ಧ ಹಲವು ಬಾರಿ ಪಕ್ಷದ ಹಿರಿಯ ಮುಖಂಡರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಅವರು ಕಾರ್ಯಕರ್ತರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.