Kidnappers: ಯುವಕರಿಂದ ಆಟೋದಲ್ಲಿ ಕುಳಿತಿದ್ದ ಮಹಿಳೆಯ ಕಿಡ್ನಾಪ್! ವಿಡಿಯೋ ವೈರಲ್
Kidnappers: ಆಟೋದಲ್ಲಿ ಕುಳಿತಿದ್ದ ಮಹಿಳೆಯನ್ನು ಯುವಕರು ಕಿಡ್ನ್ಯಾಪ್ ಮಾಡಿ ಎಳೆದೊಯ್ದ ಘಟನೆ ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯು ರಾಜಸ್ಥಾನದ ಪಚ್ಪದ್ರ ರಸ್ತೆಯಲ್ಲಿರುವ ಪ್ರಥ್ವಿರಾಜ್ ಧರಂಕಾತ್ ಬಳಿ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
https://twitter.com/Sadhana_Singh99/status/1860189414938587445
ವಿಡಿಯೋದಲ್ಲಿ ಬೆಳಂಬೆಳಗ್ಗೆ ಕೆಲವು ಯುವಕರು ಸ್ಕಾರ್ಪಿಯೋದಲ್ಲಿ ಬಂದು ಆಟೋದಲ್ಲಿ ಕುಳಿತಿದ್ದ ಮಹಿಳೆಗೆ ಥಳಿಸಿ ಎಳೆದೊಯ್ದು ಅಪಹರಿಸಿದ್ದಾರೆ. ಈ ವೇಳೆ ಹಲವು ಜನರು ಕಿಡ್ನ್ಯಾಪ್ ಅನ್ನು ತಡೆಯಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಕಲ್ಲು ತೂರಾಟವು ನಡೆದಿದೆ. ಆದರೆ ಸ್ಕಾರ್ಪಿಯೋ ಕಾರ್‌ನಲ್ಲಿ ಬಂದ ಯುವಕರು (Kidnapper) ಅದ್ಯಾವುದಕ್ಕೂ ಲೆಕ್ಕಿಸದೆ ಮಾಡದೇ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆ.