Students: ಶಿಕ್ಷಕಿ ಕುರ್ಚಿಯಡಿ ರಿಮೋಟ್ ಚಾಲಿತ ಬಾಂಬ್ ಸ್ಫೋಟ! ವಿದ್ಯಾರ್ಥಿಗಳ ಅಮಾನತು!
Students: ಬೊಪಾರಾ ಗ್ರಾಮದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ತರಗತಿಯಲ್ಲಿ ವಿಜ್ಞಾನ ಶಿಕ್ಷಕಿಯ ಕುರ್ಚಿಯ ಅಡಿ ಬಾಂಬ್ ರೀತಿಯ ಪಟಾಕಿ ಇರಿಸಿ ಸ್ಫೋಟಿಸಿದ ಘಟನೆ ನಡೆದಿದ್ದು, ಇದೀಗ ಘಟನೆಯಲ್ಲಿ ಶಿಕ್ಷಕಿ ಹಾಗೂ ಓರ್ವ ವಿದ್ಯಾರ್ಥಿ (Students) ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದುಷ್ಕೃತ್ಯ ನಡೆಸಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ.
ತರಗತಿಯಲ್ಲಿದ್ದ 15 ವಿದ್ಯಾರ್ಥಿಗಳ ಪೈಕಿ ಅಂದು ಹಾಜರಿದ್ದ ಎಲ್ಲಾ 13 ಜನ ಈ ಯೋಜನೆಯಲ್ಲಿ ಭಾಗಿಯಾಗಿದ್ದು, ಸ್ಫೋಟಕ ತಯಾರಿಸಿ, ಕುರ್ಚಿಯ ಕೆಳಗಿರಿಸಿ, ರಿಮೋಟ್ ಸಹಾಯದಿಂದ ಸ್ಫೋಟಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ನರೇಶ್ ಮೆಹ್ತಾ ಹೇಳಿದ್ದಾರೆ.
ಸದ್ಯ ಈ ಘಟನೆಯಿಂದ ವಿದ್ಯಾರ್ಥಿಗಳನ್ನು ಶಾಲೆಯಿಂದಲೇ ಹೊರಹಾಕಲು ಯೋಚಿಸಿದ್ದೆವಾದರೂ ಪೊಷಕರು ಕ್ಷಮೆ ಕೇಳಿದ್ದರಿಂದ ಶಿಕ್ಷೆಯನ್ನು ಅಮಾನತಿಗೆ ಸೀಮಿತಗೊಳಿಸಲಾಗಿದೆ. ಶಿಕ್ಷಕಿ ಕೂಡ ಮಕ್ಕಳನ್ನು ಕ್ಷಮಿಸಿದ್ದಾರೆ ಎಂದು ವರದಿ ಆಗಿದೆ.