Udupi : ಉಡುಪಿಯಲ್ಲಿ ಅನ್ಯಕೋಮಿನವರಿಂದ ದೇವಾಲಯ ಪ್ರವೇಶ – ಹಿಂದುಗಳ ಭಾರಿ ಆಕ್ರೋಶ!!

Share the Article

Udupi : ಉಡುಪಿಯ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಅನ್ಯ ಕೋಮಿನ ವ್ಯಕ್ತಿಗಳು ಪ್ರವೇಶ ಮಾಡಿದ್ದರಿಂದ ಹಿಂದೂ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ(Venkatramana Temple) ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಸಾಲ ಪ್ರಕರಣಕ್ಕೆ ಸಂಬಂಧಿಸಿ ನಡೆದ ಆಣೆ ಪ್ರಮಾಣ ಕಾರ್ಯಕ್ರಮ ಸಂದರ್ಭದಲ್ಲಿ ಅನ್ಯಕೋಮಿನ ಮಂದಿ ದೇವಾಲಯ ಪ್ರವೇಶಿಸಿರುವುದು ಹಿಂದೂಗಳ ಕಣ್ಣು ಕೆಂಪಾಗಿಸಿದೆ.

ವಿರುದ್ಧವಾಗಿ ಗೋಮಾಂಸ ಭಕ್ಷಕರು, ಮೂರ್ತಿ ಪೂಜೆ ವಿರೋಧಿಗಳು ಆಲಯ ಪ್ರವೇಶಿಸುವ ಮೂಲಕ ತಲೆತಲಾಂತರದಿಂದ ಪಾಲಿಸಿಕೊಂಡು ಬಂದ ಹಿಂದೂ ಧರ್ಮಾಚರಣೆಗೆ, ದೇವಳದ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿದೆ. ಹೀಗಾಗಿ ದೇವಳದ ಆಡಳಿತ ಮೊಕ್ತೇಸರ ಮಾಜಿ ಶಾಸಕ ರಘುಪತಿ ಭಟ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

Leave A Reply