Liquor Ban: ʼಮದ್ಯʼ ಪ್ರಿಯರಿಗೆ ಕಹಿ ಸುದ್ದಿ; ನ.20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌

Liquor Ban: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹ ಮಾಡಿ ಮದ್ಯದಂಗಡಿ ಮಾಲೀಕರು ಪ್ರತಿಭಟನೆಗೆ ಮುಂದಾಗಿರುವ ಕಾರಣ. ನವೆಂಬರ್‌ 20 ರಂದು ಮದ್ಯದಂಗಡಿ ಬಂದ್‌ಗೆ ಕರೆ ಮಾಡಿದ್ದಾರೆ.

ಹಾಗಾಗಿ ಬೆಂಗಳೂರಿನ ವಿಧಾನಸೌಧದಲ್ಲಿ ಮದ್ಯ ಮಾರಾಟಗಾರರ ಜೊತೆ ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿಸಿ ಜಾಫರ್‌ ಈ ಕುರಿತು ಸಭೆ ನಡೆಸಿದ್ದು, ನಂತರ ಮದ್ಯ ಮಾರಾಟಗಾರರ ಅಧ್ಯಕ್ಷ ಗುರುಸ್ವಾಮಿ ಮಾತನಾಡಿದ್ದಾರೆ.

ಚರ್ಚೆ ಮಾಡಿದ್ದು, ಸಿಎಂ ಜೊತೆ ಕೂಡ ಸಭೆ ಮಾಡುತ್ತೇವೆ. ನವೆಂಬರ್‌ 20 ರಂದು ಮದ್ಯ ಮಾರಾಟ ಬಂದ್‌ ಆಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದರು.

ಅಬಕಾರಿ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದ್ದು, ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುತ ವಿರುದ್ಧ ಮದ್ಯದಂಗಡಿ ಮಾಲೀಕರು ತಿರುಗಿ ಬಿದ್ದಿರುವ ಕಾರಣ ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆ, ಪ್ರಮೋಷನ್‌ ಗಾಗಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಇಲಾಖೆ ಸಚಿವರನ್ನು ಬದಲಾವಣೆ ಮಾಡಬೇಕು. ಭ್ರಷ್ಟಾಚಾರ ತಡೆಗಟ್ಟುವಂತೆ ಆಗ್ರಹಿಸಿ ಮದ್ಯದಂಗಡಿ ಮಾಲೀಕರು ಪ್ರತಿಭಟನೆ ಮಾಡುತ್ತಿದ್ದು, ನ.20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ಕರೆ ನೀಡಲಾಗಿದೆ.

Leave A Reply

Your email address will not be published.