Bantwala: ನಿಂತಿದ್ದ ಟೆಂಪೋದ ಗೇರ್ ಎಳೆದ ಮಕ್ಕಳು: ವಾಹನ ಹಿಂದಕ್ಕೆ ಸರಿದು ಮಗು ಮೃತ್ಯು

Share the Article

Bantwala: ಅಂಗಳದಲ್ಲಿ ಮಗು ಆಟವಾಡುತ್ತಿದ್ದ ವೇಳೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಟೆಂಪೋ ಮುಂದಕ್ಕೆ ಚಲಿಸಿ, ಮಗುವಿಗೆ ಢಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಪುಟ್ಟು ಮಗು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆಯೊಂದು ಬಂಟ್ವಾಳದ ಲೊರೆಟ್ರೊಪದವಿನಲ್ಲಿ ನಡೆದಿದೆ.

ಹೌದು, ಫರಂಗಿಪೇಟೆ (Bantwala)ಸಮೀಪದ 10ನೇ ಮೈಲಿಗಲ್ಲು ನಿವಾಸಿ ದಿ. ಉನೈಸ್ ಪತ್ನಿಯ ತಾಯಿ ಮನೆ ಬಂಟ್ವಾಳ ಸಮೀಪದ ಲೊರೆಟ್ಟೋಪದವಿನಲ್ಲಿದೆ.
ಮಗು ಲೊರೆಟ್ಟೋಪದವಿನ ತನ್ನ ಅಜ್ಜಿಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭ ಮನೆಯ ಮುಂಭಾಗ ದುರ್ಘಟನೆ ನಡೆದಿದೆ. ಅಂಗಳದಲ್ಲಿ ನಿಲ್ಲಿಸಿದ್ದ ಮಗುವಿನ ತಾಯಿಯ ಸಹೋದರನ ಟೆಂಪೋ ಏಕಾಏಕಿ ಹಿಂದಕ್ಕೆ ಬಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ನಿಲ್ಲಿಸಿದ್ದ ಟೆಂಪೋವಿನ ಗೇರ್ ಅನ್ನು ಮಕ್ಕಳು ಎಳೆದಿದ್ದು, ಈ ವೇಳೆ ಟೆಂಪೊ ಕೆಳಗೆ ಚಲಿಸಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ವರದಿ ಆಗಿದೆ.
ಗಂಭೀರ ಗಾಯಗೊಂಡ ಮಗುವನ್ನು ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಘಟನೆಯ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply