Kiccha Sudeep: ಬಿಗ್ ಬಾಸ್​ ವೇದಿಕೆಯಲ್ಲಿ ಕೈಯಲ್ಲಿ ಹಿಡಿದು ಸುದೀಪ್ ಕುಡಿಯೋದೇನು ? ಬ್ಲಾಕ್ ಕಾಫಿ, ಬ್ಲಾಕ್ ಟೀ ಯಾವುದೂ ಅಲ್ಲ ಗುರು.. ಮತ್ತೇನು ಗೊತ್ತಾ?

Kiccha Sudeep: ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ವೀಕೆಂಡ್‌ ಎಪಿಸೋಡ್‌ಗಳನ್ನು ನಡೆಸಿಕೊಡುವಾಗ ಮಧ್ಯೆ ಮಧ್ಯೆ ಒಂದು ಕಪ್ಪು ಡ್ರಿಂಕ್‌ ಅನ್ನು ಕುಡಿಯುತ್ತಾರೆ. ಅದೇನು ಎಂಬುದು ಹಲವರ ಪ್ರಶ್ನೆ. ಅದಕ್ಕೆ ಈಗ ಕಿಚ್ಚ ಸುದೀಪ್ ಅವರೇ ಉತ್ತರವನ್ನು ನೀಡಿದ್ದಾರೆ.

ಯಸ್, ಕಿಚ್ಚ ಸುದೀಪ್​(Kiccha Sudeep)ಅವರು ಕಳೆದ 11 ವರ್ಷಗಳಿಂದ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಶೋ ನಿರೂಪಣೆ ಮಾಡುವಾಗ ಅವರು ಆಗಾಗ ಏನೋ ಕುಡಿಯುತ್ತಾರಲ್ಲ ಅದು ಏನು ಎಂಬ ಪ್ರಶ್ನೆ ಹಲವರಿಗೆ ಇದೆ. ಇನ್ನು ಕಿಚ್ಚ ನಡೆಸಿಕೊಡುವ ಬಿಗ್ ಬಾಸ್ ಅನ್ನು ಕನ್ನಡಿಗರು ಮಾತ್ರವಲ್ಲ ತೆಲುಗುನವರು ಕೂಡ ನೋಡುತ್ತಾರೆ. ಕಿಚ್ಚನಿಗೆ ಹಲವು ತೆಲುಗು ಅಭಿಮಾನಿಗಳಿದ್ದಾರೆ. ಹೀಗಾಗಿ ಅವರು ನಡೆಸಿಕೊಡುವ ‘ಬಿಗ್ ಬಾಸ್ ಕನ್ನಡ’ಕಾರ್ಯಕ್ರಮವನ್ನು ತೆಲುಗು ಪ್ರೇಕ್ಷಕರು ಕೂಡ ನೋಡುತ್ತಾರೆ. ಅವರಿಗೂ ಕೂಡ ಇದೇ ಪ್ರಶ್ನೆ ಉದ್ಭವವಾಗಿದೆ. ಹೀಗಾಗಿ ಕಿಚ್ಚನ ಇದಕ್ಕೆ ಸ್ವತಹ ಪ್ರತಿಕ್ರಿಯೆ ನೀಡಿದ್ದಾರೆ.

ಭಾನುವಾರದ (ನವೆಂಬರ್​ 3) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಷಯ ಪ್ರಸ್ತಾಪಿಸಿದರು. ‘ತೆಲುಗು ಬಿಗ್ ಬಾಸ್ ನೋಡುತ್ತಿರುವ ಎಷ್ಟೋ ಜನ ಫ್ಯಾನ್ಸ್ ಒಂದು ಪ್ರಶ್ನೆ ಹಾಕಿ ಹೇಳುತ್ತಾ ಇರುತ್ತಾರೆ. ಸುದೀಪ್ ಅವರು ವೇದಿಕೆಯಲ್ಲಿ ಕುಡಿತಾ ಇರುತ್ತಾರಲ್ಲ ಅದು ಏನು ಅಂತ. ಇದರಲ್ಲಿ ಸ್ವಲ್ಪ ರಮ್, ಸ್ವಲ್ಪ ವಿಸ್ಕಿ..’ ಎಂದು ಕನ್ನಡದಲ್ಲಿ ಮಾತಾಡುತ್ತಿದ್ದ ಸುದೀಪ್​ ಅವರು ನಂತರ ಸ್ಪರ್ಧಿಗಳ ಸಹಾಯದಿಂದ ತೆಲುಗಿನಲ್ಲಿ ಮಾತು ಮುಂದುವರಿಸಿದರು.

ಸ್ವಲ್ಪ ಅನ್ನೋದಕ್ಕೆ ತೆಲುಗಿನಲ್ಲಿ ಏನು ಹೇಳ್ತಾರೆ? ಕೊಂಚ ರಮ್ ಉಂದಿ, ಕೊಂಚ ವಿಸ್ಕಿ ಉಂದಿ, ಕೊಂಚ ಟಕೀಲಾ ಉಂದಿ ಅನಿ ಥಿಂಕ್ ಚೈ ವದ್ದು. ಕಾಫಿ ಉಂದಿ. ಕಾನಿ ಈ ಕಂಟೆಸ್ಟೆಂಟ್​ಕೋ ನಾಕು ಸಾರಾಯಿ ಕಾವಾಲಿ. ಇಕ್ಕಡ ಲೇದು’ ಎಂದು ಸುದೀಪ್​ ಹೇಳಿದ್ದು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು. ಭಾನುವಾರದ ಸಂಚಿಕೆಯಲ್ಲಿ ಈ ರೀತಿಯ ಮಾತುಗಳ ಮೂಲಕ ಸುದೀಪ್ ಅವರು ನಗು ತುಂಬಿಸಿದರು. ಸುದೀಪ್‌ ಅವರ ಈ ಮಾತು ಕೇಳಿ ಬಿಗ್‌ ಬಾಸ್‌ ಸ್ಪರ್ಧಿಗಳು ಬಿದ್ದು ಬಿದ್ದು ನಗಾಡಿದ್ದಾರೆ.

Leave A Reply

Your email address will not be published.