Lawyer Jagdish: ಆಂಕರ್ ಜೊತೆ ಲಾಯರ್​ ಜಗದೀಶ್​ ರೊಮಾನ್ಸ್! ಜಗದೀಶ್ ರೊಮಾನ್ಸ್​ ನೋಡಿ ಶಾಕ್ ಮೇಲೆ ಶಾಕ್!!

Share the Article

Lawyer Jagdish: ಬಿಗ್​ಬಾಸ್​ ಕನ್ನಡ ಸೀಸನ್ 11 ರಲ್ಲಿ ಎಲ್ಲರ ಮನೆ ಮಾತಾಗಿದ್ದ ಡೇರಿಂಗ್ ಲಾಯರ್ ಜಗದೀಶ್ ಬಗ್ಗೆ ಇಲ್ಲೊಂದು ಹೊಸ ಸುದ್ದಿಯಿದೆ. ಈಗಾಗಲೇ,ಒಬ್ಬರಾದ್ಮೇಲೆ ಒಬ್ಬರ ಮೇಲೆ ಎಗರಾಡ್ತಿರುವ ಅವರು ಕರ್ನಾಟಕದ ಕ್ರಶ್ ಎಂಬ ಪಟ್ಟ ಪಡೆದಿದ್ದಾರೆ. ಅಂತೆಯೇ ಬಿಗ್​ಬಾಸ್​ ಮನೆಯಲ್ಲಿ ಇನ್ನೋರ್ವ ಸ್ಪರ್ಧಿ ಹಂಸಾ ಜೊತೆ ಇವರ ರೊಮ್ಯಾನ್ಸ್​ ಸಕತ್​ ಸದ್ದು ಮಾಡಿತ್ತು. 

ಆದರೆ ಇದೇ ವೇಳೆ ಅವರ ಪತ್ನಿ ಸೌಮ್ಯಾ ಮಾತ್ರ ಪತಿಯ ಕುರಿತು ಬೇರೆದೇ ಹೇಳಿಕೆ ನೀಡಿದ್ದರು. ಜಗದೀಶ್ (Lawyer Jagdish) ರೋಮ್ಯಾಂಟಿಕ್ ಅಲ್ಲ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಅವರ ಡಾನ್ಸ್ ನೋಡಿ ಖುಷಿಯಾಗಿದ್ದೇನೆ. ಮನೆಯಲ್ಲಿ ನಾನು ಡಾನ್ಸ್ ಮಾಡ್ತೇನೆ. ಆದ್ರೆ ಅವರು ನಗ್ತಾ ಕುಳಿತಿರ್ತಾರೆ ಬಿಟ್ರೆ ಡ್ಯಾನ್ಸ್ ಮಾಡಲ್ಲ. ಅವರು ಸ್ವಲ್ಪ ನಾಚಿಕೆ ಸ್ವಭಾವ ಅವರದ್ದು ಎಂದಿದ್ದರು. ಆದ್ರೆ ಪತ್ನಿ ಏನೇ ಹೇಳಿದರೂ ಜಗದೀಶ್​ ಅವರು ರೊಮ್ಯಾಂಟಿಕ್ ಮ್ಯಾನ್​ ಎಂದೇ ಬಿಗ್​ಬಾಸ್​ನಿಂದ ಫೇಮಸ್​ ಆದವರು.

ಇದೀಗ ಜಗದೀಶ್ ಅವರಿಗೆ ಬಿಗ್​ಬಾಸ್​ನಿಂದ ಬಂದ ಮೇಲೆ ಸಹಜವಾಗಿ ಡಿಮ್ಯಾಂಡ್​ ಹೆಚ್ಚಾಗಿದೆ. ಮುಖ್ಯವಾಗಿ ಜಗದೀಶ್ ಅವರು ಡಾನ್ಸ್ ಕರ್ನಾಟಕ ಡಾನ್ಸ್​ ವೇದಿಕೆಗೆ ಅವರು ಆಗಮಿಸಿದ್ದಾರೆ. ಡಿಕೆಡಿಯಲ್ಲಿ ಜಗದೀಶ್​ ಅವರು ಡಾನ್ಸ್​ ಮಾಡಿದ್ದಾರೆ. ಇದೇ ವೇಳೆ ಕೆಲವು ಮಾತನಾಡಿರುವ ಜಗದೀಶ್​ ಅವರು, ಪಕ್ಕದಲ್ಲೇ ಇರುವ ಆ್ಯಂಕರ್​ ಅನುಶ್ರೀ ತಮ್ಮ ಸ್ವರ್ಗ ಎಂದೂ ಹೇಳಿದ್ದಾರೆ! ವೇದಿಕೆಯ ಮೇಲೆ ತಮಾಷೆ ಮಾಡುವ ಸಮಯದಲ್ಲಿ ಲಾಯರ್​ ಜಗದೀಶ್​ ಅವರು, ನನ್ನ ಲಕ್ಕಿ ನಂಬರ್ ಸೆವೆನ್​. ನನ್ನ ಪಕ್ಕವೇ ಇದೆ ಹೆವನ್ ಎಂದು ಅನುಶ್ರೀಯವರನ್ನು ಉದ್ದೇಶಿಸಿ ಹೇಳಿದ್ದಾರೆ. ಇದನ್ನು ಕೇಳಿ ಅನುಶ್ರೀ ಅವರು ನಾಚಿ ನೀರಾಗಿದ್ದಾರೆ.

https://www.facebook.com/watch/?v=531862599690710

 

 

Leave A Reply