Pavitra Gowda: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್‌ಗೆ ಬೇಲ್‌ ದೊರಕ್ತಿದ್ದಂತೆ ಪವಿತ್ರಾ ಗೌಡ ಖುಷಿ

Share the Article

Pavitra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರು ನಟ ದರ್ಶನ್‌ಗೆ ದೊರಕಿರುವ ಮಧ್ಯಂತರ ಬೇಲ್‌ ಗೆ ಸಂಬಂಧಪಟ್ಟಂತೆ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಟಿವಿಯಲ್ಲಿ ದರ್ಶನ್‌ಗೆ ಬೇಲ್‌ ಸಿಕ್ಕ ವಿಚಾರ ತಿಳಿದು ಖುಷಿ ವ್ಯಕ್ತಪಡಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಮಹಿಳಾ ಬ್ಯಾರಕ್‌ನಲ್ಲಿರುವ ಪವಿತ್ರಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಹಾಗೆನೇ ಒಂದು ವಾರದಲ್ಲಿ ವೈದ್ಯಕೀಯ ವರದಿಯನ್ನು ಕೂಡಾ ಕೋರ್ಟ್‌ಗೆ ನೀಡಲು ಕೋರ್ಟ್‌ ಆದೇಶ ನೀಡಿದೆ. ಹೆಲ್ತ್‌ಗ್ರೌಂಡ್ಸ್‌ ಮೇಲೆ ಈ ಜಾಮೀನು ಮಂಜೂರು ಮಾಡಿದೆ. 131 ದಿನಗಳಿಂದ ಜೈಲು ವಾಸ ಅನುಭವಿಸಿದ್ದ ದರ್ಶನ್‌ಗೆ ಈಗ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಕೋರ್ಟ್‌ ಕಂಡೀಷನ್ಸ್‌: ಚಿಕಿತ್ಸೆ ಕುರಿತ ಕಂಪ್ಲೀಟ್‌ ಮಾಹಿತಿಯನ್ನು ಕೋರ್ಟ್‌ಗೆ ನೀಡಬೇಕು.
ಪಾಸ್‌ಪೋರ್ಟ್‌ ನ್ನು ಕೋರ್ಟ್‌ಗೆ ಸರೆಂಡರ್‌ ಮಾಡಬೇಕು. ಎಲ್ಲೂ ವಿದೇಶಕ್ಕೆ ಹೋಗೋ ಹಾಗಿಲ್ಲ
ಬೇರೆ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಅಂದರೆ ಶೂಟಿಂಗ್‌ಗೆ ಹೋಗುವಂತಿಲ್ಲ.
ಆರೋಪಿ ದರ್ಶನ್‌ ಇಚ್ಛಿಸಿದ ಆಸ್ಪತ್ರೆಗೆ ದಾಖಲಾಗಬಹುದು ಎಂದು ಹೈಕೋರ್ಟ್‌ ಹೇಳಿದೆ. 2.2 ಲಕ್ಷ ರೂಪಾಯಿ ಬಾಂಡ್‌, ಇಬ್ಬರ ಶ್ಯೂರಿಟಿ, ಸಾಕ್ಷಿ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕಬಾರದು, ಸಾಕ್ಷಿ ನಾಶಕ್ಕೆ ಪ್ರಯತ್ನ ಪಡಬಾರದು, ಸಾಕ್ಷಿಗಳ ಸಂಪರ್ಕ ಮಾಡಬಾರದು,ಜಾಮೀನಿನ ದುರಪಯೋಗ ಮಾಡಿಕೊಳ್ಳಬಾರದು.

Leave A Reply

Your email address will not be published.