Pejavara Shri: ಗಾಯತ್ರಿ ಮಂತ್ರ ಯಾರು ಜಪಿಸುವುದಿಲ್ಲವೋ ಅವರು ಬ್ರಾಹ್ಮಣರಾಗಲು ಅರ್ಹರಲ್ಲ- ಉಡುಪಿಯ ಪೇಜಾವರ ಶ್ರೀ ಹೇಳಿಕೆ

Share the Article

Pejavara Shri: ಕೆಲವು ಸಮಯದ ಹಿಂದೆ ಉಡುಪಿಯ ಸುಗುಣೇಂದ್ರ ಶ್ರೀಗಳು ಸಂಸ್ಕೃತ ಬಾರದವರು ಸ್ವರ್ಗಕ್ಕೆ ಹೋಗಲು ಅರ್ಹರಲ್ಲ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು ಇದೀಗ ಈ ಬೆನ್ನಲ್ಲೇ ಉಡುಪಿಯ ಪೇಜಾವರ ಶ್ರೀಗಳು(Pejaravara Shri)ಗಾಯತ್ರಿ ಮಂತ್ರವನ್ನು(Gayatri Mantra)ಪಠಿಸದವರು ಬ್ರಾಹ್ಮಣರಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ.

ಹೌದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಹಾಗೂ ಮಹಾಸಭಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಚಿತ್ರಾಪುರ ಮಠದ(Chitrapura Mut)ಆಶ್ರಯದಲ್ಲಿ ಚಿತ್ರಾಪುರಲ್ಲಿ ನಡೆದ ಗಾಯತ್ರಿ ಸಂಗಮ ಸಾಂಘಿಕ ಕೋಟಿ ಗಾಯತ್ರಿ ಜಪಯಜ್ಞದ `ಧರ್ಮ ಸಭೆಯಲ್ಲಿ ಅವರು ಭಾನುವಾರ ಆಶೀರ್ವವಚನ ನೀಡಿದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ‘ಗಾಯತ್ರಿ ಮಂತ್ರ ಜಪಿಸದವರು ಬ್ರಾಹ್ಮಣರು ಎನಿಸಿಕೊಳ್ಳಲು ಯಾವುದೇ ಅರ್ಹತೆಯನ್ನೂ ಹೊಂದಿರಲಾರರು. ಋಷಿಗಳಿಂದ, ಹಿರಿಯರಿಂದ ಬಂದ ಈ ಅನುಷ್ಠಾನವನ್ನು ನಾವು ಪಾಲಿಸುವುದರ ಜೊತೆಗೆ, ಮುಂದಿನ ಪೀಳಿಗೆಗೂ ಮುಂದುವರಿಸಬೇಕಿದೆ’ ಎಂದು ಹೇಳಿದ್ದಾರೆ.

ಅಲ್ಲದೆ ‘ರಾಷ್ಟ್ರ ಗೀತೆಯಂತೆ ಬ್ರಾಹ್ಮಣ ಸಮುದಾಯಕ್ಕೆ ಗಾಯತ್ರಿ ಮಂತ್ರವೇ ಎಲ್ಲರನ್ನೂ ಒಂದುಗೂಡಿಸುವ ಗೀತೆ. ಎಲ್ಲರಿಗೂ ಒಳ್ಳೆಯ ಬುದ್ಧಿ, ಒಳ್ಳೆಯ ಚಿಂತನೆ ಕೊಡು ಎನ್ನುವ ಗಾಯತ್ರಿ ಮಂತ್ರದ ಮೂಲಕ ಬ್ರಾಹ್ಮಣ ಸಮಾಜ ಒಂದಾಗಬೇಕು’ ಎಂದರು.

Leave A Reply