Bala jeevan Post office scheme: ದಿನಕ್ಕೆ 6 ರೂ. ನಿಮ್ಮ ಮಕ್ಕಳ ಹೆಸರಿನಲ್ಲಿ ಕಟ್ಟಿದ್ರೆ ನಿಮಗೆ ಸಿಗುತ್ತೇ ಮೂರು ಲಕ್ಷ!

Bala jeevan Post office scheme: ಪೋಷಕರು ತಮ್ಮ ಮಕ್ಕಳಿಗಾಗಿ ಹೂಡಿಕೆ ಮಾಡಲು ಅಂಚೆ ಕಚೇರಿ ಉತ್ತಮ ಆಯ್ಕೆ ಆಗಿದೆ. ಯಾಕೆಂದರೆ ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಅಂಚೆ ಕಚೇರಿಯಲ್ಲಿ ಪಾಲಕರು ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದರೆ ಮಕ್ಕಳಿಗೆ ಕೂಡ ಪಾಲಿಸಿ ತೆಗೆದುಕೊಳ್ಳುವುದು ಸುಲಭ.

ಹೌದು, ಬಾಲ ಜೀವನ್ ಭೀಮಾ ಯೋಜನೆ ತುಂಬಾ ಪ್ರಯೋಜನಕಾರಿ ಯೋಜನೆಯಾಗಿದೆ. ಈ ಯೋಜನೆಯು ಪಾಲಿಸಿದಾರರ ಮಕ್ಕಳಿಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.
ನೀವು ಈ ಯೋಜನೆ ಮೂಲಕ ಕನಿಷ್ಠ 6 ರೂಪಾಯಿ ಹೂಡಿಕೆ ಮಾಡಬೇಕು. ಗರಿಷ್ಠ 3,00,000 ಪ್ರೀಮಿಯಂ ಪಾವತಿ ಮಾಡಬಹುದು.

ಮುಖ್ಯವಾಗಿ ಕುಟುಂಬದ ಇಬ್ಬರು ಮಕ್ಕಳು ಮಾತ್ರ ಈ ಯೋಜನೆ (Scheme) ಯ ಲಾಭ ಪಡೆಯಬಹುದು. ಮಗು ಜನಿಸಿದ ನಂತರ 5 ರಿಂದ 20 ವರ್ಷದೊಳಗಿನ ಮಕ್ಕಳ ಪೋಷಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮಗುವಿನ ಪೋಷಕರು 5 ವರ್ಷಗಳ ಯೋಜನೆ ಪಡೆಯುತ್ತಿದ್ದರೆ ಪ್ರತಿದಿನ 18 ರೂಪಾಯಿ ಪಾವತಿ ಮಾಡಬೇಕು. ಅದೇ 20 ವರ್ಷಗಳವರೆಗಿನ ಯೋಜನೆಯನ್ನು ತೆಗೆದುಕೊಂಡಲ್ಲಿ ಅವರು ದಿನಕ್ಕೆ 6 ರೂಪಾಯಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಮಕ್ಕಳ ಬಾಲ ಜೀವನ್ ಬಿಮಾ ಯೋಜನೆಯಲ್ಲಿ ಕನಿಷ್ಠ ವಿಮಾ ಮೊತ್ತವು 1,00,000 ರೂಪಾಯಿ ಮತ್ತು ಗರಿಷ್ಠ ವಿಮಾ ಮೊತ್ತ 3,00,000 ರೂಪಾಯಿ ಆಗಿರುತ್ತದೆ. ಪಾಲಿಸಿದಾರ ಮಧ್ಯದಲ್ಲಿಯೇ ಸಾವನ್ನಪ್ಪಿದ್ರೆ ಹಣವನ್ನು ಪಾವತಿಸುವ ಅಗತ್ಯವಿಲ್ಲ. ಪಾಲಿಸಿ ಅವಧಿ ಮುಗಿದ ಮೇಲೆ ಸಂಪೂರ್ಣ ಹಣ ಸಿಗುತ್ತದೆ. ಮಧ್ಯದಲ್ಲಿಯೇ ಪಾಲಿಸಿ ವಿತ್ ಡ್ರಾ ಮಾಡ್ಬೇಕು ಅಂದ್ರೆ ಐದು ವರ್ಷ ಕಾಯಬೇಕು. ಐದುವರ್ಷಕ್ಕಿಂತ ಮೊದಲು ಪಾಲಿಸಿ ಹಣ ಪಡೆಯಲು ಸಾಧ್ಯವಿಲ್ಲ.

ಮಕ್ಕಳ ಜೀವ ವಿಮಾ ಯೋಜನೆ ಅರ್ಹತಾ ಮಾನದಂಡ ಹೀಗಿದೆ:
ನಿಮ್ಮ ಮಕ್ಕಳಿಗಾಗಿ ಮಕ್ಕಳ ಜೀವ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮೊದಲು ಮಗುವಿನ ವಯಸ್ಸು ಕನಿಷ್ಠ 5 ವರ್ಷಗಳು ಮತ್ತು ಗರಿಷ್ಠ ವಯಸ್ಸು 20 ವರ್ಷಗಳು. ಈ ಯೋಜನೆಯಡಿ ಕುಟುಂಬದ 2 ಮಕ್ಕಳು ಮಾತ್ರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಮಕ್ಕಳ ಜೀವ ವಿಮಾ ಯೋಜನೆಗೆ ಅಗತ್ಯವಿರುವ ದಾಖಲೆಗಳು : ಮಕ್ಕಳ ಜೀವ ವಿಮಾ ಯೋಜನೆಗೆ ಅರ್ಜಿ ಸಲ್ಲಿಸುವಾಗ, ಮಗುವಿನ ಜನನ ದಾಖಲೆ, ಆಧಾರ್ ಕಾರ್ಡ್, ವಿಳಾಸದ ದಾಖಲೆ, ಪೋಷಕರ ಆಧಾರ್ ಕಾರ್ಡ್,ಮೊಬೈಲ್ ನಂಬರ್, ಪಾಸ್ಪೋರ್ಟ್ ಗಾತ್ರದ ಫೋಟೋ ಅಗತ್ಯವಿರುತ್ತದೆ.

ಅರ್ಜಿ ಸಲ್ಲಿಕೆ ವಿಧಾನ:
ಮಕ್ಕಳಿಗೆ ಬಾಲ ಜೀವನ್ ಬೀಮಾ ಯೋಜನೆಗಾಗಿ ಪಾಲಕರು ಮೊದಲು ಹತ್ತಿರದ ಅಂಚೆ ಕಚೇರಿಯಲ್ಲಿ ಈ ಯೋಜನೆ ಅರ್ಜಿ ಪಡೆದು ಅದನ್ನು ಭರ್ತಿ ಮಾಡಬೇಕು. ನಂತರ ಅರ್ಜಿ ಮತ್ತು ದಾಖಲೆಯನ್ನು ಸಂಬಂಧಿಸಿದ ಅಧಿಕಾರಿಗೆ ನೀಡಬೇಕು. ಅಧಿಕಾರಿಗಳು ಅರ್ಜಿ, ದಾಖಲೆ ಪರಿಶೀಲಿಸಿ ರಶೀದಿ ನೀಡುತ್ತಾರೆ.

Leave A Reply

Your email address will not be published.