Actor Darshan: ವಿಜಯಲಕ್ಷ್ಮಿ ಬಳಿ ದರ್ಶನ್ ಭೇಟಿಗಾಗಿ ನಟ ನಟಿಯರ ಮನವಿ: ದರ್ಶನ್ ಹೊಳೋದು ಇದೊಂದೇ ಉತ್ತರ

Share the Article

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಬಂದು ಎರಡು ತಿಂಗಳಾಗಿದೆ. ಈ ಎರಡು ತಿಂಗಳ ಅವಧಿಯಲ್ಲಿ ಚಾರ್ಜ್‌ಶೀಟ್‌, ಜಾಮೀನು ಟೆನ್ಶನ್‌ ಜೊತೆಗೆ ಜೊತೆಗೆ ಬೆನ್ನು ನೋವಿನಿಂದ ದರ್ಶನ್ ದಿನ ಕಳೆಯುತ್ತಿದ್ದಾರೆ.

ಈಗಾಗಲೇ ಈ ನಡುವೆ ಎರಡು ತಿಂಗಳಲ್ಲಿ ಪತ್ನಿ, ತಾಯಿ, ಸಹೋದರ, ಸಹೋದರಿ, ಕೆಲವು ಸಂಬಂಧಿಗಳು ಭೇಟಿ ಮಾಡಿದ್ದಾರೆ. ಅಲ್ಲದೇ ಒಂದಷ್ಟು ಸ್ನೇಹಿತರು ಬಂದು ಹೋಗಿದ್ದಾರೆ‌. ಆದ್ರೆ ಈಗ ದರ್ಶನ್ (Actor Darshan) ಅವರನ್ನು ನೋಡಲು ಹಲವು ನಟ ನಟಿಯರು ಬಳ್ಳಾರಿ ಜೈಲಿಗೆ ಬರಲು ಮುಂದಾಗಿದ್ದು ಪತ್ನಿ ವಿಜಯಲಕ್ಷ್ಮಿ ಬಳಿ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಲು ನಟ, ನಟಿಯರು ಅವಕಾಶವನ್ನು ಕೇಳುತ್ತಿದ್ದಾರೆ. ಆದ್ರೆ ತನ್ನ ಭೇಟಿಗೆ ಹಂಬಲಿಸುತ್ತಿರುವ ಸ್ಯಾಂಡಲ್‌ವುಡ್‌ ನಟ, ನಟಿಯರಿಗೆ ದರ್ಶನ್ (Darshan) ಒಪ್ಪಿಗೆ ನೀಡಿಲ್ಲ.

ಹೌದು, ಯಾರೂ ಬಳ್ಳಾರಿ ಜೈಲಿಗೆ (Ballari Jail) ಬರುವುದು ಬೇಡ, ಸದ್ಯಕ್ಕೆ ನನಗೆ ಯಾರನ್ನೂ ಭೇಟಿಯಾಗಲು ಇಷ್ಟ ಇಲ್ಲ. ನನಗೆ ಸ್ವಲ್ಪ ದಿನದಲ್ಲೇ ಜಾಮೀನು ಸಿಗಬಹುದು ಎಂಬ ನಂಬಿಕೆ ನಂಗಿದೆ. ಆಗ ನಾನೇ ಬೆಂಗಳೂರಿಗೆ ಬರುತ್ತೇನೆ ಅಲ್ಲಿಯೇ ಭೇಟಿಯಾಗೋಣ ಎಂಬ ದರ್ಶನ್‌ ಪತ್ನಿ ವಿಜಯಲಕ್ಷ್ಮಿ (Vijayalakshmi) ಮೂಲಕ ಸಂದೇಶ ರವಾನೆ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

Leave A Reply