Kambala: ಕಂಬಳ: ತಾಕತ್ತಿದ್ದರೆ ಒಂದು ಜೊತೆ ಕೋಣವನ್ನು ಒಂದು ತಿಂಗಳು ಸಾಕಿ ನೋಡಲಿ ಅಶೋಕ್ ರೈ ಸವಾಲು
Kambala: ಬೆಂಗಳೂರು ನಗರದಲ್ಲಿ ಕಂಬಳ ನಡೆಸಲು ಅವಕಾಶ ನೀಡಬಾರದು ಎಂದು ಪೆಟಾ ಸಂಸ್ಥೆಯವರು ರಾಜ್ಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ವಿರುದ್ಧ, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ, ತಮ್ಮ ವೈಯಕ್ತಿಕ ನೆಲೆಯಲ್ಲಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.
ಇನ್ನು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಅಶೋಕ್ ರೈ ಅವರು ಮಾತನಾಡಿ, ಕಳೆದ ಬಾರಿ ಬೆಂಗಳೂರು ಕಂಬಳವನ್ನು (Kambala) 9 ಕೋಟಿ ಖರ್ಚಿನಲ್ಲಿ ಮಾಡಿದ್ದೇವೆ. ಅಂತೆಯೇ ಈ ಬಾರಿ ಬೆಂಗಳೂರು ಕಂಬಳ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಸರಕಾರದಿಂದ ಪರ್ಮಿಷನ್ ಸಿಕ್ಕಿದ್ದು, ಮೈಸೂರು ಮಹಾರಾಣಿಯವರಿಂದ ಅನುಮತಿ ಸಿಗಬೇಕಿದೆ ಎಂದರು.
ಈ ಸಲ ಪೇಟಾದವರು ಕೇಸು ಮಾಡಿದ್ದಾರೆ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ಕಂಬಳ ಮಾಡುತ್ತಾರೆಂದು ಬರೆದು ಕೊಟಿದ್ದಾರೆಂದು ಆಕ್ಷೇಪಿಸಿದ್ದಾರೆ. ಕರಾವಳಿ ಜಿಲ್ಲೆಗಳ ಜನಪದ ಕ್ರೀಡೆಯೆಂದು ಹೇಳಿದ್ದೇವೆ, ಇಲ್ಲಿ ಮಾತ್ರ ಮಾಡುತ್ತೇವೆಂದು ನಾವು ಬರೆದುಕೊಟ್ಟಿಲ್ಲ. ಮಣಿಪುರದ ನೃತ್ಯವನ್ನು ಮಣಿಪುರದಲ್ಲಿ ಮಾತ್ರ ಮಾಡಬೇಕೆನ್ನುವುದು ಸರಿಯಲ್ಲ ಎಂದಿದ್ದಾರೆ.
ಅಲ್ಲದೇ ಇನ್ನು ಕೋಣದ ಬಾಯಲ್ಲಿ ನೊರೆ ಬರುತ್ತದೆ ಎಂದು ಆಕ್ಷೇಪಿಸಿದ್ದಾರೆ. ಕೋಣನ ಬಾಯಲ್ಲಿ ನೊರೆ ಬರದೆ ಪೇಟಾದವರ ಬಾಯಲ್ಲಿ ನೊರೆ ಬರುತ್ತದೆಯೇ.? ಕೇಸು ಮಾಡುವ ಬದಲು ಇವರು ತಾಕತ್ತಿದ್ದರೆ ಒಂದು ಜೊತೆ ಕೋಣವನ್ನು ಒಂದು ತಿಂಗಳು ಸಾಕಿ ನೋಡಲಿ ಎಂದು ಸವಾಲು ಹಾಕಿದ್ದಾರೆ.