Mangalore: ‘ಪುಡಿ ರಾಜಕಾರಣಿʼ ಯಾರು ಎಂದು ಮಲ್ಲೇಶ್ವರಂನ ಗಲ್ಲಿ ಗಲ್ಲಿಗೂ ಗೊತ್ತಿದೆ; ಹರೀಶ್‌ ಪೂಂಜಾ ಬಿಕೆ ಹರಿಪ್ರಸಾದ್‌ ವಿರುದ್ಧ ಕಿಡಿ

Mangalore: ಶಾಸಕ ಹರೀಶ್‌ ಪೂಂಜಾ ಅವರು ಕಾಂಗ್ರೆಸ್‌ ಎಂಎಲ್‌ಸಿ ಬಿಕೆ ಹರಿಪ್ರಸಾದ್‌ ವಿರುದ್ಧ ಕಿಡಿಕಾರಿದ್ದು, ಗುರುಗಳನ್ನು ನಿಂದಿಸಿ ಹಿಂದೂಗಳ ಭಾವನೆಗೆ ಘಾಸಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

 

ಪೇಜಾವರ ಶ್ರೀಗಳ ವಿರುದ್ಧ ʼಪುಡಿ ರಾಜಕಾರಣಿʼ ಎಂಬ ಹೇಳಿಕೆ ನೀಡಿದ್ದ ಬಿಕೆ ಹರಿಪ್ರಸಾದ್‌ ಕುರಿತು ಹರೀಶ್‌ ಪೂಂಜಾ ಅವರು, ಪೇಜಾವರಶ್ರೀಗಳ ವಿರುದ್ಧ ಹೇಳಿದಂತೆ ಬಿಕೆ ಹರಿಪ್ರಸಾದ್‌ಗೆ ತಾಕತ್‌ ಇದ್ದರೆ ಮುಸಲ್ಮಾನ ಧರ್ಮಗುರುಗಳು, ಕ್ರೈಸ್ತ ಪಾದ್ರಿಗಳ ಕುರಿತು ಅವಹೇಳನ ಮಾತುಗಳನ್ನಾಡಲಿ, ಆಮೇಲೆ ನೋಡೋಣ. ಸೌಮ್ಯ ಸ್ವಭಾವದ ಹಿಂದೂ ಧಾರ್ಮಿಕ ಗುರುಗಳ ಮೇಲೆ ಏನು ಮಾತಾಡಿದರೂ ನಡೆಯುತ್ತೆ ಎಂದುಕೊಂಡಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಹಿಂದೊಮ್ಮೆ ಬಿಕೆ ಹರಿಪ್ರಸಾದ್‌ ಹಿಂದೂ, ಮುಸಲ್ಮಾನ ಡಿಎನ್‌ಎ ಒಂದೇ ಎಂದು ಹೇಳಿದ್ದರು. ನಿಮ್ಮ ಡಿಎನ್‌ಎ ಯಾವುದು ಎಂದು ಮೊದಲು ಚೆಕ್‌ ಮಾಡಿಸಿಕೊಳ್ಳಿ, ಏಕೆಂದರೆ ಹಿಂದೂಗಳ ಡಿಎನ್‌ಎ ರಾಮ ಹಾಗೂ ಕೃಷ್ಣನ ಡಿಎನ್‌ಎ ಆಗಿದೆ. ನಿಮ್ಮದು ಹಿಂದೂ ಡಿಎನ್‌ಎ ಆಗಿದ್ದರೆ ಹಿಂದೂ ಸ್ವಾಮೀಜಿ ಕುರಿತು ಹೀಗೆ ಹೇಳುತ್ತಿರಲಿಲ್ಲ. ನಿಮ್ಮ ಡಿಎನ್‌ಎ ಯಲ್ಲಿ ಕೇಸರಿ ಇದೆಯಾ? ಹಸಿರು ಬಣ್ಣ ಇದೆಯೇ ನೋಡಬೇಕು. ಅಥವಾ ಬಿಳಿ ಇದೆಯಾ ನೋಡಬೇಕು, ಮೊದಲು ನಿಮ್ಮ ಡಿಎನ್‌ಎ ಟೆಸ್ಟ್‌ ಮಾಡಬೇಕು ಎಂದು ತಿರುಗೇಟು ನೀಡಿದ್ದಾರೆ.

ಪೇಜಾವರಶ್ರೀಗಳು ಎಲ್ಲ ಜಾತಿಗಳನ್ನು ಮೀರಿ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂತಹ ಸ್ವಾಮೀಜಿಗಳಿಗೆ ಪುಡಿ ರಾಜಕಾರಣಿ ಅಂತೀರಾ? ಪುಡಿ ರಾಜಕಾರಣಿ ಯಾರು ಎಂದು ಮಲ್ಲೇಶ್ವರಂನ ಗಲ್ಲಿ ಗಲ್ಲಿಗೆ ಗೊತ್ತಿದೆ. ಬಿಕೆ ಹರಿಪ್ರಸಾದ್ ಯೋಗ್ಯತೆಗೆ ಒಂದು ಚುನಾವಣೆ ಗೆಲ್ಲೋ ಯೋಗ್ಯತೆ ಇಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.