Diwali festival: ದೀಪಾವಳಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ: ಬೆಲೆ ಏರಿಕೆ ಬಿಸಿ ತಡೆಗೆ ಗ್ರಾಹಕರಿಗೆ ಕೊಡುಗೆ

Share the Article

Diwali festival: ಬೆಲೆ ಏರಿಕೆ(price hike) ಬಿಸಿ ತಡೆಯಲು ನಗರದಲ್ಲಿ ಭಾರತ್ ಉತ್ಪನ್ನಗಳ(bharat product) ಬಿಡುಗಡೆ ಮಾಡಲು ಕೇಂದ್ರ ಸರ್ಕಾರ(Central govt) ನಿರ್ಧರಿಸಿದೆ. ಅಕ್ಟೋಬರ್ 30 ರಿಂದ ಭಾರತ್ ಉತ್ಪನ್ನಗಳ ಬಿಡುಗಡೆ ಮತ್ತು ಮಾರಾಟ ಮಾಡಲಾಗುತ್ತದೆ. ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ರಿಯಾಯಿತಿ(offer price) ದರದಲ್ಲಿ ಭಾರತ್ ಉತ್ಪನ್ನಗಳ ಮಾರಾಟ ನಡೆಯಲಿದೆ.

NCCFI ಯಿಂದ ಭಾರತ್ ಉತ್ಪನ್ನಗಳ ಮಾರಾಟವಾಗಲಿದೆ. ರಿಯಾಯಿತಿ ದರದಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಭಾರತ್ ಉತ್ಪನ್ನಗಳ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಹಬ್ಬಕ್ಕೆ ಈ ವಸ್ತುಗಳ ವಿತರಣೆ ಮಾಡಲಾಗುತ್ತದೆ.

ಯೋಜನೆ ಅಡಿಯಲ್ಲಿ ಏನೆಲ್ಲಾ ದೊರೆಯಲಿದೆ.?
– ಅಕ್ಕಿ – 34 ರೂ (ಕೆಜಿಗೆ)
– ಗೋದಿ ಹಿಟ್ಟು- 30 ರೂ (ಕೆಜಿಗೆ)
– ಕಡಲೆ ಬೇಳೆ – 70 ರೂ (ಕೆಜಿಗೆ)
– ಹೆಸರು ಬೇಳೆ – 107 ರೂ (ಕೆಜಿಗೆ)

ಪ್ರಸುತ್ತ ಮಾರ್ಕೆಟ್ ದರ
ಅಕ್ಕಿ -55 ರೂ ರಿಂದ 60 ರೂ (ಕೆಜಿ)
ಗೋದಿ ಹಿಟ್ಟು- 45 ರೂ ರಿಂದ 50 ರೂ(ಕೆಜಿ)
ಬೇಳೆ -90 ರೂ ರಿಂದ 100 ರೂ(ಕೆಜಿ)

Leave A Reply