Hindu heritage month: ಅಕ್ಟೋಬರ್ ತಿಂಗಳು ಹಿಂದೂ ಪರಂಪರೆ ಮಾಸ: ಆಸ್ಟ್ರೇಲಿಯಾ ಅಧಿಕೃತ ಘೋಷಣೆ

Hindu heritage month: ಅಕ್ಟೋಬರ್ ತಿಂಗಳನ್ನು “ಹಿಂದೂ ಪರಂಪರೆ ಮಾಸ” ಎಂದು ಆಸ್ಟ್ರೇಲಿಯಾ ಘೋಷಿಸಿದೆ. ಭಾನುವಾರದಂದು ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ “ಅಕ್ಟೋಬರ್ ತಿಂಗಳನ್ನು ಹಿಂದೂ ಪರಂಪರೆ ಮಾಸ” (Hindu heritage month) ಎಂದು ಘೋಷಿಸಿದರು. ಮುಖ್ಯವಾಗಿ ಹಿಂದೂ ಪರಂಪರೆ ಮಾಸ ಎಂದು ಘೋಷಿಸಿರುವ ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
https://x.com/MeghUpdates/status/1850512051145203814
ಜಗತ್ತಿನ ಹಲವು ದೇಶಗಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂತೆಯೇ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಹಿಂದೂಗಳು ಪ್ರತಿವರ್ಷ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ಹಿನ್ನಲೆ ಈ ವರ್ಷ ಆಸ್ಟ್ರೇಲಿಯಾ ಅಕ್ಟೋಬರ್ ತಿಂಗಳನ್ನು “ಹಿಂದೂ ಪರಂಪರೆ ಮಾಸ” ಎಂದು ಆಸ್ಟ್ರೇಲಿಯಾ ಸಂಸದ ಆಂಡ್ರ್ಯೂ ಚಾರ್ಲ್ಟನ್ ಘೋಷಿಸಿದ್ದಾರೆ.