Vidhana Soudha: ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ಗೆ ವಿಧಾನಸೌಧ ಮೇಲೆ ಡ್ರೋನ್‌ ಹಾರಿಸಿದ ವ್ಯಕ್ತಿ, ಬಂಧನ

Share the Article

Vidhana Soudha: ವಿಧಾನಸೌಧ ಕಟ್ಟಡದ ಮೇಲೆ ಡ್ರೋನ್‌ ಕ್ಯಾಮೆರಾ ಹಾರಿಸುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ. ಅನುಮತಿ ಇಲ್ಲದೆ ಡ್ರೋನ್‌ ಹಾರಿಸಿದ್ದಕ್ಕೆ ತುಮಕೂರು ಜಿಲ್ಲೆ ಉಪ್ಪಾರಹಳ್ಳಿ ನಿವಾಸಿ ವಿನಯ್‌ (33) ಬಂಧಿತ ವ್ಯಕ್ತಿ.

ಆರೋಪಿಯಿಂದ ಡ್ರೋನ್‌ ಕ್ಯಾಮೆರಾ ಮತ್ತು ರಿಮೋಟ್‌ ಜಪ್ತಿ ಮಾಡಲಾಗಿದೆ.

ವಿಧಾನಸೌಧದ ಪೂರ್ವ ದ್ವಾರದ ಬಳಿ ಹೆಡ್‌ಕಾನ್‌ಸ್ಟೇಬಲ್‌ ಶಿವಕುಮಾರ್‌ ಅವರು ಬಂದಾಗ, ಕಟ್ಟಡದ ಮೇಲಿನಿಂದ ಶಬ್ದ ಕೇಳಿದೆ. ತಕ್ಷಣ ಹೋಗಿ ನೋಡಿದಾಗ ವಿಧಾನಸೌಧ ಕಟ್ಟಡದ ಮೇಲೆ ಚಿಕ್ಕ ಡ್ರೋನ್‌ ಹಾರಾಡುತ್ತಿರುವುದು ಕಂಡು ಬಂದಿದೆ.

ನಂತರ ಪರಿಶೀಲನೆ ಮಾಡಿದಾಗ ಅಂಬೇಡ್ಕರ್‌ ವೀದಿಯ ಹೈಕೋರ್ಟ್‌ ಕಡೆ ಇರುವ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಅಪರಿಚಿತ ವ್ಯಕ್ತಿ ಕೈಯಲ್ಲಿ ರಿಮೋಟ್‌ ಹಿಡಿದುಕೊಂಡು ಡ್ರೋನ್‌ ಹಾರಾಟ ಮಾಡುತ್ತಿರುವುದು ಕಂಡು ಬಂದಿದೆ. ನಂತರ ಆತನನ್ನು ವಶಕ್ಕೆ ಪಡೆದು ಡ್ರೋನ್‌ ಕೆಳಗೆ ಇಳಿಸಿ, ಡ್ರೋನ್‌ ಮತ್ತು ರಿಮೋಟ್‌ ಜಪ್ತಿ ಮಾಡದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಆರೋಪಿ ವಿನಯ್‌, ಪ್ರೀ ವೆಡ್ಡಿಂಗ್‌ ಪ್ರಯುಕ್ತ ತುಮಕೂರಿನಿಂದ ಬೆಂಗಳೂರಿನಿಂದ ಬಂದಿದ್ದು, ಡ್ರೋನ್‌ ಕ್ಯಾಮೆರಾದಲ್ಲಿ ವಿಧಾನಸೌಧ ಕಟ್ಟಡದ ವಿಡಿಯೋ ಸೆರೆ ಹಿಡಿದಿರುವುದಾಗಿ ಹೇಳಿಕೆ ನೀಡಿದ್ದಾನೆ.

ಈ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.