New Delhi: ಅಯ್ಯಪ್ಪ ಭಕ್ತರಿಗೆ ಸಿಹಿ ಸುದ್ದಿ; ವಿಮಾನದಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿ

New Delhi: ಕೇರಳದ ಶಬರಿಮಲೆಗೆ ತೆರಳುವ ಅಯ್ಯಪ್ಪ ಸ್ವಾಮಿ ಭಕ್ತರು ಇನ್ನು ಮುಂದೆ ಇಡುಮುಡಿ ಕಟ್ಟು ತೆಂಗಿನಕಾಯಿ ತೆಗೆದುಕೊಂಡು ಹೋಗಲು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ ಅನುಮತಿಯನ್ನು ನೀಡಿದೆ. ಈ ಅನುಮತಿ ಜನವರಿ 20, 2025 ರವರಿಗೆ ನೀಡಲಾಗಿದೆ.
ನಿಯಮಾವಳಿಯ ಪ್ರಕಾರ, ಕ್ಯಾಬಿನ್ ಬ್ಯಾಗೇಜ್ ನಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ತೆಂಗಿನಕಾಯಿ ಹೊತ್ತಿ ಉರಿಯುವ ಗುಣ ಹೊಂದಿರುವುದರಿಂದ ನಿರ್ಬಂಧ ವಿಧಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಎಕ್ಸ್‌ರೇ ಮತ್ತು ಸ್ಫೋಟಕ ಪತ್ತೆ ಶೋಧಕದಿಂದ ಪರಿಶೀಲನೆ ಮಾಡಿದ ನಂತರ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುವುದು.
ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಇಡುಮುಡಿ ಕಟ್ಟು ಸಹಿತ ಪೂಜಾ ಸಾಮಗ್ರಿ, ತುಪ್ಪ ತುಂಬಿದ ತೆಂಗಿನ ಕಾಯಿ ಇರುತ್ತದೆ. ಇದನ್ನು ತೆಗೆದುಕೊಂಡು ಹೋಗಲು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಮತಿ ನೀಡಿದೆ.