Kambala: ಕಂಬಳ ಋತು ಆರಂಭಕ್ಕೆ ಕ್ಷಣಗಣನೆ: ಈ ಬಾರಿ ಮೊದಲ ಕಂಬಳ ಎಲ್ಲಿ? ಕಾತುರದಿಂದ ಕಾಯುತ್ತಿರುವ ಜನತೆ!
Kambala: ಕಳೆದ ಬಾರಿ ಬೆಂಗಳೂರಿನಲ್ಲಿ(Bengaluru) ತುಳುನಾಡ ಜಾನಪದ ಕ್ರೀಡೆ ಕಂಬಳ(Kambala) ಹಬ್ಬದೂಟದ ರಸದೌತಣವನ್ನು ನೀಡಿತ್ತು. ಇದೀಗ ಮತ್ತೆ ಈ ವರ್ಷದ ಮಳೆಗಾಲ(Rain season) ಮುಗಿಯುತ್ತಿದ್ದಂತೆ ತುಳುನಾಡಿನಾದ್ಯಂತ(Tulunadu) ಜಾನಪದೀಯ ಕ್ರೀಡೆ ಕಂಬಳದ ಋತು ಆರಂಭವಾಗುತ್ತದೆ. ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಮುಂದಿನ ಕಂಬಳಕ್ಕೆ ಭಾಗವಹಿಸುವ ಕೋಣಗಳನ್ನು ಹುರಿಗೊಳಿಸುವ ಕಾರ್ಯದಲ್ಲಿ ಯಜಮಾನರು ನಿರತರಾಗಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ ಕಂಬಳದ ಪೂರ್ವತಯಾರಿಯಾಗಿ ಪ್ರತೀ ವಾರಾಂತ್ಯದಲ್ಲಿ ಕುದಿ ಕಂಬಳಗಳು ನಡೆಯುತ್ತಿವೆ. ಕೋಣಗಳ ವೇಗ, ಜೋಡಿಗಳ ಸಾಮರ್ಥ್ಯ ಅರಿಯಲು ಕುದಿ ಕಂಬಳವನ್ನು ಅಲ್ಲಲ್ಲಿ ನಡೆಸಲಾಗುತ್ತಿದೆ. ಈ ಮೂಲಕ ಸ್ನೇಹಕೂಟ ಕಂಬಳಗಳೂ ಭರ್ಜರಿಯಾಗಿ ನಡೆಯುತ್ತಿವೆ.
ಮಳೆ ವಿರಾಮ ನೀಡುತ್ತಿದ್ದಂತೆಯೇ ಕೋಣಗಳನ್ನು ಕಂಬಳದ ಗದ್ದೆಗೆ ಕರೆತಂದು ಸ್ಪರ್ಧೆಗೆ ಹುರಿಗೊಳಿಸಲು ತಯಾರಿ ನಡೆಸಲಾಗುತ್ತದೆ. ಅತೀ ವೇಗವಾಗಿ ಓಡಬೇಕಾದರೆ ಕೋಣಗಳಿಗೆ ಪೂರ್ವತಯಾರಿ, ಅಭ್ಯಾಸ ಮಾಡಿಸಬೇಕಾಗುತ್ತದೆ. ಹಾಗಾಗಿ ಪ್ರತೀ ದಿನ ಈಗ ಕಂಬಳ ಗದ್ದೆಗಳಲ್ಲಿ ಕುದಿ ಕಂಬಳಗಳು ಜೋರಾಗೆ ನಡೆಯುತ್ತಿವೆ. ಈ ಕುದಿ ಕಂಬಳದ ಮೂಲಕ ದಿನ ಕಳೆದಂತೆ ಕೋಣಗಳ ವೇಗವನ್ನು ತಿಳಿಯಬಹುದು. ಹಾಗೆ ಇದೇ ಕುದಿಯಲ್ಲಿ ಜೋಡಿಗಳ ಆಯ್ಕೆಯನ್ನು ಮಾಡಲಾಗುತ್ತದೆ. ಜೋಡಿ ಕೋಣಗಳನ್ನು ಒಟ್ಟಿಗೆ ಓಡಿಸಿ, ಅವುಗಳ ಸಾಧಕ-ಬಾಧಕಗಳನ್ನು ಗುರುತಿಸಿ ಮತ್ತೆ ಅವುಗಳಿಗೆ ಹೆಚ್ಚಿನ ತರಬೇತಿಯನ್ನು ನೀಡಲಾಗುತ್ತದೆ.
ಕಳೆದ ಬಾರಿ ಚಾಂಪಿಯನ್ ಆದ ಕೋಣಗಳು ಈ ಬಾರಿಯೂ ಚಾಂಪಿಯನ್ ಆಗಬೇಕೇಂದಿಲ್ಲ. ಇನ್ನುಳಿದ ಕೋಣಗಳೂ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿ ಓಡಬಹುದು. ಅದಕ್ಕಾಗಿಯೇ ಕುದಿ ಕಂಬಳದಲ್ಲಿ ಕೋಣಗಳ ಓಡಿಸಿ, ಅವುಗಳ ವೇಗ, ಕಾಲುಗಳ ಚಲನೆಯನ್ನು ಗಮನಿಸಲಾಗುತ್ತದೆ. ನಂತರ ಮುಂದಿನ ಸ್ಪರ್ಧೆಗೆ ಜೋಡಿಗಳನ್ನು ನಿರ್ಧರಿಸಲಾಗುತ್ತದೆ. ಕಳೆದ ಬಾರಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ಕಂಬಳ ರಾಜ್ಯದಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಬಾರಿ ವಿಶೇಷವೆಂಬಂತೆ ಮತ್ತೊಮ್ಮೆ ರಾಜಧಾನಿ ಬೆಂಗಳೂರಿನಬಿಂದಲೇ ಮೊದಲ ಕಂಬಳ ಆರಭವಾದರೆ, ಕೊನೆಯ ಕಂಬಳ ಮಲೆನಾಡು ಶಿವಮೊಗ್ಗದಲ್ಲಿ ನಡೆಯಲಿದೆ.
2024ರ ಕಂಬಳದ ವೇಳಾಪಟ್ಟಿ ಹೀಗಿದೆ
ಅಕ್ಟೋಬರ್ 26 – ಬೆಂಗಳೂರು
ನವೆಂಬರ್ 9 – ಪಿಲಿಕುಳ
ನವೆಂಬರ್ 16 – ಪಣಪಿಲ
ನವೆಂಬರ್ 23 – ಕೊಡಂಗೆ
ನವೆಂಬರ್ 30 – ಕಕ್ಕೆಪದವು
ಡಿಸೆಂಬರ್ 7 – ಹೊಕ್ಕಾಡಿಗೋಳಿ
ಡಿಸೆಂಬರ್ 14 – ಬಾರಾಡಿಬೀಡು
ಡಿಸೆಂಬರ್ 21 – ಮೂಲ್ಕಿ
ಡಿಸೆಂಬರ್ 28 – ಮಂಗಳೂರು
ಜನವರಿ 4 – ಮಿಯ್ಯಾರು
ಜನವರಿ 11 – ನರಿಂಗಾನ
ಜನವರಿ 18 – ಅಡ್ವೆ
ಜನವರಿ 25 – ಮೂಡುಬಿದಿರೆ
ಫೆಬ್ರವರಿ 1 – ಐಕಳ
ಫೆಬ್ರವರಿ 8 – ಜೆಪ್ಪು
ಫೆಬ್ರವರಿ 15 – ವಾಮಂಜೂರು
ಫೆಬ್ರವರಿ 22 – ಕಟಪಾಡಿ
ಮಾರ್ಚ್ 1 – ಪುತ್ತೂರು
ಮಾರ್ಚ್ 8 – ಬಂಗಾಡಿ
ಮಾರ್ಚ್ 15 – ಬಂಟ್ವಾಳ
ಮಾರ್ಚ್ 22 – ಉಪ್ಪಿನಂಗಡಿ
ಮಾರ್ಚ್ 29 – ವೇಣೂರು
ಏಪ್ರಿಲ್ 5 – ಬಳ್ಕುಂಜೆ
ಏಪ್ರಿಲ್ 12 – ಗುರುಪುರ
ಏಪ್ರಿಲ್ 19 – ಶಿವಮೊಗ್ಗ