Phone Storage Full: ನಿಮ್ಮ ಫೋನ್ ಸ್ಟೋರೇಜ್ ಫುಲ್ ಆಗಲು ಇದೊಂದೇ ಮುಖ್ಯ ಕಾರಣ: ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ
Phone Storage Full: ಇತ್ತೀಚಿಗೆ ಸ್ಮಾರ್ಟ್ ಫೋನ್ ಗಳಲ್ಲಿ ಹಲವು ಆಪ್ ಇನ್ಸ್ಟಾಲ್ ಮಾಡಿ ಉಪಯೋಗ ಮಾಡುತ್ತೇವೆ. ಆದ್ರೆ ಎಲ್ಲಕ್ಕಿಂತ ಹೆಚ್ಚಾಗಿ ನಾವು ವಾಟ್ಸಪ್ ಬಳಸುತ್ತೇವೆ. ಆದ್ರೆ ಈ ವಾಟ್ಸಾಪ್ ನಿಂದ ನಿಮ್ಮ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ ಎಂದು ನಿಮಗೆ ಗೊತ್ತಾ?!. ಹೌದು, ಈ ರೀತಿ ಸ್ಟೋರೇಜ್ ಫುಲ್ (Phone Storage Full) ಆಗದಂತೆ ತಡೆಯಲು ಈ ಟಿಪ್ಸ್ ಫಾಲೋ ಮಾಡಿ ಸಾಕು.
ಸಾಮಾನ್ಯವಾಗಿ, ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಕೋಟಿಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸ್ಆ್ಯಪ್ನ (WhatsApp) ಒಂದು ಗ್ರೂಪ್ನಲ್ಲೇ ಅನೇಕ ಮಂದಿ ಸದಸ್ಯರಿರುತ್ತಾರೆ. ಇದರಲ್ಲಿ ನಿಮಿಷಕ್ಕೊಂದು ಫೋಟೋ, ವಿಡಿಯೋ ಅಥವಾ ಫೈಲ್ಗಳು ಬರುತ್ತಲೇ ಇರುತ್ತದೆ. ಇವುಗಳು ನೇರ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಸೇವ್ ಆಗುತ್ತದೆ. ಇದರಿಂದ ನಿಮ್ಮ ಫೋನಿನ ಮೆಮೋರಿ ಕೂಡ ಬೇಗನೆ ಫುಲ್ ಆಗಿ ಸ್ಟೋರೇಜ್ ಸಮಸ್ಯೆ ಉಂಟಾಗುತ್ತದೆ. ಆಗ ಒಂದೊಂದೆ ಫೋಟೋವನ್ನು ಹುಡುಕಿಕೊಂಡು ಡಿಲೀಟ್ ಮಾಡೋದು ತುಂಬಾ ಕಿರಿ ಕಿರಿ ಅನಿಸುತ್ತೆ,. ಆದರೆ, ವಾಟ್ಸ್ಆ್ಯಪ್ನಲ್ಲಿ ಬಂದ ಅನಗತ್ಯ ಫೋಟೋವನ್ನು ಡೌನ್ಲೋಡ್ ಮಾಡದೆ ಇರುವುದಕ್ಕೆ ಈ ಟಿಪ್ಸ್ ಖಂಡಿತಾ ವರ್ಕ್ ಆಗುತ್ತೆ.
ಅದಕ್ಕಾಗಿ ವಾಟ್ಸ್ಆ್ಯಪ್ ಸೆಟ್ಟಿಂಗ್ಸ್ನಲ್ಲಿರುವ ಸ್ಟೋರೇಜ್-ಡೇಟಾ ಆಯ್ಕೆಗೆ ಹೋಗಿ ಮಿಡಿಯಾ ಅಟೋ-ಡೌನ್ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ಹೀಗೆ ಮಾಡಿದರೆ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್ಗಳು ನೀವು ಡೌನ್ಲೋಡ್ ಕೊಟ್ಟರೆ ಮಾತ್ರ ಆಗುತ್ತದೆ.
ಇನ್ನು ನಮ್ಮ ಮೊಬೈಲ್ನಲ್ಲಿರುವ ಕೆಲವು ಅಪ್ಲಿಕೇಷನ್ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್ಗಳನ್ನು ಮೊದಲು ಅನ್ಇನ್‌ಸ್ಟಾಲ್ ಮಾಡಿ.