Health: ಹಾಸ್ಟೆಲ್ ಅಥವಾ ಪಿಜಿಗಳಲ್ಲಿರುವವರಿಗೆ ಶಾಕಿಂಗ್ ನ್ಯೂಸ್!
Health: ಹಾಸ್ಟೆಲ್ ಅಥವಾ ಪಿಜಿಗಳಲ್ಲಿರುವವರಿಗೆ ಶಾಕಿಂಗ್ ನ್ಯೂಸ್ ಒಂದು ಇಲ್ಲಿದೆ. ಅನಿವಾರ್ಯ ಕಾರಣದಿಂದ ಹಾಸ್ಟೆಲ್ ಅಥವಾ ಪಿಜಿಗಳಲ್ಲಿ ಉಳಿದುಕೊಳ್ಳುವವರು ಈ ವಿಷ್ಯ ತಿಳಿಯಲೇ ಬೇಕು. ಈಗಾಗಲೇ ಕರ್ನಾಟಕದ ಹಾಸ್ಟೆಲ್, ಪಿ.ಜಿಗಳಲ್ಲಿ ಎಚ್ಐವಿ ಏಡ್ಸ್(ಎಚ್ಐವಿ ರೋಗ) ಹೆಚ್ಚಾಗ್ತಿದೆ ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಎಚ್ಐವಿ ಈ ರೋಗ (Health) ಹರಡುವಿಕೆ ಇದು ನಿಜಕ್ಕೂ ಕರ್ನಾಟಕವೇ ಬೆಚ್ಚಿಬೀಳುವಂತಹ ಸುದ್ದಿ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಸ್ಟಲ್ ಹಾಗೂ ಪಿ.ಜಿಗಳಲ್ಲಿ ಇರುವ ಹುಡುಗರಲ್ಲಿ ಏಡ್ಸ್ ಹಾಗೂ ಎಚ್ಐವಿ ಸೋಂಕು ಹೆಚ್ಚಾಗುತ್ತಿದೆಯಂತೆ. ಇದಕ್ಕೆ ಕಾರಣ ಕೇಳಿದರೆ ನೀವು ಕಂಡಿತವಾಗಿಯೂ ಶಾಕ್ ಆಗ್ತೀರಿ.
ಎಚ್ಐವಿ ಎನ್ನುವುದು ಸದ್ಯ ವಾಸಿ ಮಾಡಲಾಗದ ರೋಗ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಸಣ್ಣ ವಯಸ್ಸಿನ ಮಕ್ಕಳೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಮುಖ್ಯವಾಗಿ ರಾಜ್ಯದಲ್ಲಿ ಹಾಸ್ಟೆಲ್ ಹಾಗೂ ಪಿ.ಜಿಗಳಲ್ಲಿ ಸೆಕ್ಸ್ನಿಂದ ಎಚ್ಐವಿ ಹೆಚ್ಚಾಗುತ್ತಿದೆ.
ಹೌದು ಇದಕ್ಕೆ ಕಾರಣವಾಗಿರುವುದು “ಸಲಿಂಗಕಾಮ” (ಪರಸ್ಪರ ಗಂಡು ಅಥವಾ ಹೆಣ್ಣು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು). ಹೌದು ರಾಜ್ಯದ ಕೆಲವು ಪ್ರಮುಖ ಪಿ.ಜಿ ಹಾಗೂ ಹಾಸ್ಟೆಲ್ಗಳಲ್ಲಿ ಹುಡುಗರು ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಇದು ಎಚ್ಐವಿ/ ಏಡ್ಸ್ ಹೆಚ್ಚಳಕ್ಕೆ ಕಾರಣವಾಗಿದೆ.ಮೂರ್ನಾಲ್ಕು ವರ್ಷದಿಂದ ಸಲಿಂಗಕಾಮದಲ್ಲಿ ಯುವಕರು ತೊಡಗಿದ್ದು. ಸೆಕ್ಸ್ ಮಾಡುವಾಗ ಮುಂಜಾಗ್ರಾತಾ ಕ್ರಮ (ಸುರಕ್ಷತಾ ವಿಧಾನ) ಅನುಸರಿಸದೆ ಇರುವುದೇ ಕಾರಣ ಎಂದು ಹೇಳಲಾಗಿದೆ.
ಇದೀಗ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ಸಲಿಂಗಕಾಮದಿಂದ ಎಚ್ಐವಿ ಹಾಗೂ ಏಡ್ಸ್ ಹೆಚ್ಚಳವಾಗುತ್ತಿರುವುದು ವರದಿಯಾಗಿದೆ. ಈ ಭಾಗದಲ್ಲಿನ ಪಿ.ಜಿ ಹಾಗೂ ಹಾಸ್ಟೆಲ್ನಲ್ಲಿರುವ ಕೆಲವು ಹುಡುಗರು ಸಲಿಂಗಕಾಮದಲ್ಲಿ ತೊಡಗಿದ್ದಾರೆ. ಸಲಿಂಗಕಾಮದಿಂದ ಏಡ್ಸ್ ಹರಡುತ್ತಿದೆ. ಸೆಕ್ಸ್ ಮಾಡುವಾಗ ಯಾವುದೇ ಸುರಕ್ಷತಾ ಕ್ರಮವನ್ನು ಅನುಸರಿಸುತ್ತಿಲ್ಲ. ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಲ್ಲಿ ಎಚ್ಐವಿ ಇರುವುದು ದೃಢಪಟ್ಟಿದೆ. ಎಚ್ಐವಿ ಸೋಂಕು ಕಾಣಿಸಿಕೊಂಡ ನೂರು ಜನರಲ್ಲಿ ಹತ್ತು ಜನರಲ್ಲಿ ಸಲಿಂಗಕಾಮವೇ ಕಾರಣ ಎಂದು ತಿಳಿದು ಬಂದಿದೆ.