R Ashok: ಶಾಸಕ ಮುನಿರತ್ನಗೆ ಪಕ್ಷದಿಂದ ನೋಟಿಸ್: ಯಾವುದಕ್ಕೂ ಎಫ್ಎಸ್ ಎಲ್ ರಿಪೋರ್ಟ್ ಬರಲಿ – ಆರ್ ಅಶೋಕ್

R Ashok: ಶಾಸಕ ಮುನಿರತ್ನ(MLA Muniratna) ವಿರುದ್ಧ ಕ್ರಮ ವಿಚಾರವಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್ ಅಶೋಕ್(R Ashok) ಅವರಿಗೆ ಪಕ್ಷದಿಂದ ನೋಟಿಸ್( Notice) ಕೊಡಲಾಗಿದೆ. ನೋಟಿಸ್ ಮೂಲಕ ವಿವರಣೆ ಕೇಳಲಾಗಿದೆ. ನಿನ್ನೆಯೂ ಪೊಲೀಸ್( Police) ಅಧಿಕಾರಿಗಳ ಜೊತೆ ಮಾತಾಡಿದ್ದೇನೆ. ಎಫ್ಎಸ್ ಎಲ್ ರಿಪೋರ್ಟ್(FSL Report) ಬರಲಿ, ತಪ್ಪು ಇದ್ದರೆ ರಾಜೀನಾಮೆ(Resign) ಕೇಳ್ತೀವಿ ಎಂದರು.
ಪಕ್ಷದಿಂದಲೂ ಕ್ರಮ ಕೈಗೊಳ್ಳೋದಾಗಿಯೂ ಹೇಳಿದ್ದೇವೆ. ಆದರೆ ಕಾಂಗ್ರೆಸ್ ನಿಂದ ಕೋಳಿವಾಡ ವಿರುದ್ಧ ಯಾಕೆ ಕ್ರಮ ಆಗಿಲ್ಲ..? ನಾವಾದರೂ ನೋಟಿಸ್ ಕೊಟ್ಟಿದ್ದೇವೆ, ಆದರೆ ನೀವು ನೋಟಿಸ್ಸೇ ಕೊಟ್ಟಿಲ್ಲ. ನಾನು ಸಿಎಂ ನಾನು ಸಿಎಂ ಅಂತಾ ಹೇಳಿಕೊಂಡು ಓಡಾಡ್ತಿದ್ರು ಸುಮ್ಮನೆ ಇದ್ದೀರಾ. ಎಷ್ಟು ಜನರಕ್ಕೆ ನೋಟಿಸ್ ಕೊಟ್ಟಿದ್ದೀರಾ..? ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಸಿಎಂ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ ಅಂತೀರಾ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು. ಅಲ್ಲದೆ ಡಿಕೆಶಿ ಹೋಮ ಮಾಡಿಸುತ್ತಿದ್ದಾರೆ. ಡಿಸೆಂಬರ್ ಬಳಿಕ ಸಿಎಂ ಆಗುವ ಕನಸಿನಲ್ಲಿದ್ದಾರೆ. ಸಿಎಂ ಸ್ಥಾನ ಸಿಗಲಿ ಅಂತ ಡಿಸಿಎಂ ಪೂಜೆ ಮಾಡ್ತಾರೆ. ಸಿದ್ದರಾಮಯ್ಯ ಕುಂಕುಮ ಇಡ್ತಾ ಇರಲಿಲ್ಲ ಈಗ ಇಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ, ಡಾ.ಜಿ. ಪರಮೇಶ್ವರ್ ಸಿದ್ದಗಂಗಾ ಮಠದಲ್ಲಿ ಪೂಜೆ ಮಾಡಿಸ್ತಾರೆ. ಒಂದು ಅಭಿವೃದ್ಧಿ ಕಾರ್ಯ ಇಲ್ಲ. ಸೋರುತಿರುವುದು ಸರ್ಕಾರಿ ಶಾಲೆಗಳು. ನೀರಾವರಿ ಯೋಜನೆ ಇಲ್ಲ. ಹಗರಣ ಬಿಟ್ಟರೆ ಬೇರೆನೂ ಆಗ್ತಿಲ್ಲ. ಒಂದೇ ಒಂದು ಅಭಿವೃದ್ಧಿ ಕಾರ್ಯ ನಾವು ಮಾಡಿಲ್ಲ ಅಂತ ಅವರೇ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಗೆ ಆರ್ ಅಶೋಕ್ ಟಾಂಗ್ ನೀಡಿದರು.