Hair color: ಹೇರ್ ಕಲರ್ ತುಂಬಾ ದಿನ ಇರ್ಬೇಕಂದ್ರೆ ಈ ಟಿಪ್ಸ್ ಫಾಲೋ ಮಾಡಿ!

Share the Article

Hair color: ಮುಖದ ಅಂದವನ್ನು ಹೆಚ್ಚಿಸಲು ಮತ್ತು ಯವ್ವನ ಗುರುತಿಸಿಕೊಳ್ಳಲು ಬಿಳಿ ಕೂದಲು ಇರೋ ಪ್ರತಿಯೊಬ್ಬರೂ ಹೇರ್ ಕಲರ್ (Hair color) ಹಾಕೋದು ಇದ್ದೇ ಇರುತ್ತೆ. ಆದ್ರೆ ಅಲ್ಲೊಂದು ಸಮಸ್ಯೆ ಏನಂದ್ರೆ ಎಷ್ಟೇ ಚೆನ್ನಾಗಿ ಹೇರ್ ಕಲರ್ ಮಾಡಿದ್ರು ಹೆಚ್ಚು ದಿನ ಉಳಿಯಲ್ಲ. ಅದಕ್ಕಾಗಿ ಹೇರ್ ಕಲರ್ ಬಣ್ಣ ಬೇಗ ಮಾಯ ಆಗದೇ ಇರೋಕೆ ಈ ಟಿಪ್ಸ್ ಫಾಲೋ ಮಾಡಿ.

ಮುಖ್ಯವಾಗಿ ಹೇರ್ ಕಲರ್ ಬಳಸೋರು ಕಲರ್ ಪ್ರೊಟೆಕ್ಟಿಂಗ್ ಶಾಂಪೂನನ್ನ ಬಳಸಬೇಕು. ಈ ಶಾಂಪೂ ಹೇರ್ ಕಲರ್ ಬಣ್ಣನ ತೆಗೆಯಲ್ಲ. ನೀವು ರೆಗ್ಯುಲರ್ ಶಾಂಪೂ ಬಳಸಿದ್ರೆ ಹೇರ್ ಕಲರ್ ಹಾಕಿದ್ರೂ ಉಪಯೋಗ ಆಗಲ್ಲ. ಇದು ಬಣ್ಣನ ಹೋಗಿಸುತ್ತೆ. ಹಾಗಾಗಿ ಕಲರ್ ಪ್ರೊಟೆಕ್ಟಿಂಗ್ ಶಾಂಪೂನನ್ನೇ ಬಳಸಿ. 

ಇನ್ನು ಹೇರ್ ಕಲರ್ ಬಣ್ಣ ಹೆಚ್ಚು ದಿನ ಇರಬೇಕು ಅಂದ್ರೆ ಬಿಸಿ ನೀರಿನಿಂದ ಸ್ನಾನ ಮಾಡಬಾರದು. ಬಿಸಿ ನೀರು ಕೂದಲಿಗೆ ಹಾನಿ ಮಾಡುತ್ತೆ. ಜೊತೆಗೆ ಹೇರ್ ಕಲರ್ ಬಣ್ಣನೂ ಬೇಗ ಹೋಗಿಸುತ್ತೆ. ಹಾಗಾಗಿ ತಣ್ಣೀರಿನಿಂದ ಅಥವಾ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. 

 ಹಲವರು ಹೇರ್ ಕಲರ್ ಹಚ್ಚಿದ ಮೇಲೆ ತಕ್ಷಣ ಸ್ನಾನ ಮಾಡಲ್ಲ. ಆದ್ರೆ ಇದು ತಪ್ಪು. ಇದು ಕೂದಲಿಗೆ ಹಾನಿ ಮಾಡುತ್ತೆ. ಹೇರ್ ಕಲರ್ ನಲ್ಲಿರೋ ಕೆಲವು ಅಂಶಗಳು ಕೂದಲಿಗೆ ಹಾನಿ ಮಾಡುತ್ತೆ.ಹಾಗಾಗಿ ಪ್ಯಾಕೆಟ್ ಮೇಲೆ ಕೊಟ್ಟಿರೋ ಸಮಯಕ್ಕೆ ಮಾತ್ರ ಹೇರ್ ಕಲರ್ ಹಚ್ಚಿ. ಆದ್ರೆ ಹೆಚ್ಚು ಹೊತ್ತು ಹೇರ್ ಕಲರ್ ಹಚ್ಚಿರಬೇಡಿ. 

 ಹೇರ್ ಕಲರ್ ಹಾಕಿದ ಮೇಲೆ ಕೆಲವು ಕೆಲಸಗಳನ್ನ ಮಾಡಬಾರದು. ಮುಖ್ಯವಾಗಿ ಸ್ಟ್ರೈಟ್ನರ್ ಗಳು ಅಥವಾ ಕರ್ಲರ್ ಗಳನ್ನ ಬಳಸಬಾರದು. ಹೇರ್ ಕಲರ್ ಹಾಕಿದ ಮೇಲೆ ಇವುಗಳನ್ನ ಬಳಸಿದ್ರೆ ಕೂದಲು ಹಾನಿಗೊಳಗಾಗುತ್ತೆ. ಇವು ಹೇರ್ ಕಲರ್ ಬಣ್ಣನೂ ಹೋಗಿಸುತ್ತೆ. ಹಾಗಾಗಿ ಇವುಗಳನ್ನ ಬಳಸೋ ಮುಂಚೆ ಹೀಟ್ ಪ್ರೊಟೆಕ್ಟರ್ ಹಚ್ಚಿ. ಇದು ಒಂದು ರೀತಿಯ ಲೋಷನ್. ಇದು ಕೂದಲನ್ನ ಹಾನಿಯಿಂದ ರಕ್ಷಿಸುತ್ತೆ. 

Leave A Reply