Coved scams: ಮುಡಾ ಏಟಿಗೆ ಕೋವಿಡ್ ಎದಿರೇಟು! ಕೋವಿಡ್ ಅಕ್ರಮ ಕುರಿತ ತನಿಖೆಗೆ ಸರ್ಕಾರದಿಂದ ಎಸ್ಐಟಿ ರಚನೆ: ಬಿಜೆಪಿ ವಾಗ್ದಾಳಿ

Coved scams: ಕೋವಿಡ್ ಸಂದರ್ಭದಲ್ಲ ನೂರಾರು ಕೋಟಿ ಭ್ರಷ್ಟಾಚಾರ ಆಗಿದೆ ಅನ್ನುವ ಅಂತ ಎಸ್ಐಟಿ(SIT) ರಚನೆಗೆ ಸರ್ಕಾರ(Govt) ನಿರ್ಧರಿಸಿದೆ. ಸಂಪುಟ ಉಪಸಮಿತಿ ರಚಿಸಲಿ, ನಮ್ಮ ವಿರೋಧ ಇಲ್ಲ. ಆದರೆ ಒಂದೂವರೆ ವರ್ಷ ಆಯ್ತು ಈ ಸರ್ಕಾರ ಬಂದು. ಈ ಒಂದೂವರೆ ವರ್ಷದಲ್ಲಿ ಸರ್ಕಾರ ಕಡುಬು ತಿನ್ನುತ್ತಿತ್ತಾ? ಎಂದು ಸರ್ಕಾರದ ವಿರುದ್ಧ ಪರಿಷತ್ ಸದಸ್ಯ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದರು.
ಇದುವರೆಗೆ ಏನು ಮಾಡ್ತಿದ್ರು ಇವರು, ಈಗ ಅಕ್ರಮ, ತನಿಖೆ ಅಂತ ಹೊರಟಿದ್ದಾರೆ. ನಮ್ಮ ಮುಡಾ ಹೋರಾಟದಿಂದ ಕೋವಿಡ್ ನಲ್ಲಿ ಅಕ್ರಮ ಆಗಿದೆ, ಅಕ್ರಮ ಹೊರಗೆ ತರ್ತೀವಿ ಅಂತಿದ್ದಾರೆ. ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಸಿದ್ದಾರೆ ಮುಡಾ, ವಾಲ್ಮೀಕಿ ಅಕ್ರಮಗಳು ಬಯಲಾಯ್ತು ಅಂತ ಕೋವಿಡ್ ಅಕ್ರಮ ಆಗಿದೆ ಅಂತಿದ್ದಾರೆ.ಈ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಐಟಿ ಮೂಲಕ ನಾಗೇಂದ್ರಗ ಕ್ಲೀನ್‌ಚಿಟ್ ಕೊಟ್ಟಿದ್ದೀರಿ. ಈಗ ಎಸ್ಐಟಿ ಗೆ ಕೋವಿಡ್ ಅಕ್ರಮ ಕೊಡ್ತಿದ್ದೀರಿ. ಈ ಎಸ್ಐಟಿ ಹಿಂದಿನ ಆರೋಗ್ಯ ಸಚಿವ ಸುಧಾಕರ್ ವಿಚಾರದಲ್ಲಿ ಏನು ತೀರ್ಮಾನ ತಗೊಳ್ಳುತ್ತಾರೋ ಅಂತ ಕಾದು ನೋಡ್ತೇವೆ. ನಾಗೇಂದ್ರಗೆ ಕ್ಲೀನ್‌ಚಿಟ್ ಕೊಟ್ಟ ಎಸ್ಐಟಿ ಸುಧಾಕರ್ ವಿಷಯದಲ್ಲಿ ಯಾವ ನಡೆ ಇಡುತ್ತೆ ನೋಡೋಣ ಎಂದರು.
ಈ ಸರ್ಕಾರ ತಮಗೊಂದು, ನಮಗೊಂದು ನ್ಯಾಯ ಕೊಡ್ತಿದೆ. ಮುನಿರತ್ನ ಅವರನ್ನು ತಕ್ಷಣ ಬಂಧಿಸಿದ ಈ ಸರ್ಕಾರ ವಿನಯ್ ಕುಲಕರ್ಣಿಗೆ ಯಾಕೆ ಬಂಧಿಸಿಲ್ಲ?ವಿನಯ್ ಕುಲಕರ್ಣಿ ವಿರುದ್ಧವೂ ಅತ್ಯಾಚಾರ ಆರೋಪ ಇದೆ, ಯಾಕೆ ಬಂಧಿಸ್ತಿಲ್ಲ? ಸಿದ್ದರಾಮಯ್ಯ ಬಿಜೆಪಿಗೆ ಒಂದು ಕಾನೂನು ಕಾಂಗ್ರೆಸ್ ಗೆ ಒಂದು ಕಾನೂನು ಮಾಡ್ತಿದ್ದಾರಾ? ಸಿದ್ದರಾಮಯ್ಯ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಕೋವಿಡ್ ಬಗ್ಗೆ ತನಿಖೆ ಮಾಡಿ, ನಮ್ಮ ವಿರೋಧ ಇಲ್ಲ.ಆದರೆ ಈ ನೆಪದಲ್ಲಿ ದ್ವೇಷದ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.