Bigg boss: ಬಿಗ್‌ ಬಾಸ್‌ ಸೀಸನ್‌ 11ರ ವೈಲ್ಡ್‌ ಕಾರ್ಡ್‌ ಎಂಟ್ರಿ ಇವರೇ ನೋಡಿ?!

Share the Article

Bigg boss: ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ ಸೀಸನ್ ಆರಂಭವಾಗಿ ಒಂದು ವಾರವೇ ಕಳೆದಿದೆ. ಈಗಾಗಲೇ ಮೊದಲನೇ ಸ್ಪರ್ಧಿಯಾಗಿ ಯಮುನಾ ಶ್ರೀನಿಧಿ ಔಟ್‌ ಆಗಿರೋದು ಗೊತ್ತೇ ಇದೆ.

ಆದ್ರೆ ಬಿಗ್ ಬಾಸ್ ಮನೆಯಿಂದ ಔಟ್ ಆಗಿರುವ ಯಮುನಾ ಹೊರಗಡೆ ಬಂದು ಬಿಗ್ ಬಾಸ್ ಮನೆಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹೌದು, ಯಮುನಾ ಅವರಿಗೆ ಯಾರು ರಿಯಲ್‌? ಯಾರು ಫೇಕ್‌? ಎಂಬ ಪ್ರಶ್ನೆ ಬಂದಾಗ ಅಲ್ಲಿ ಬರೀ ಒಂದು ವಾರ ಆದಂತಹ ಅನುಭವಗಳಲ್ಲಿ 90% ಫೇಕ್‌ ಅನ್ನುತ್ತೀನಿ ಎಂದರು. ದೊಡ್ಮನೆ ಯಲ್ಲಿ ಸೀದಾ ಇರೋಕೆ ಚಾನ್ಸ್‌ ಇಲ್ಲ ಅನಿಸುತ್ತೆ. ಇನ್ನು ಡಿಸಿಪ್ಲಿನ್‌ ವಿಷಯದಲ್ಲಿ ನಾನು ಮೊದಲು ಹಾಗೆಯೇ ಇದ್ದೆ. ರಿಯಾಲಿಟಿ ಶೋ, ಶೂಟಿಂಗ್‌ ಅಲ್ಲಿಯೂ ನಾನು ಹಾಗೆಯೇ ಇದ್ದೆ. ಅಲ್ಲದೇ ಆರನೇ ದಿನ ಮುಗಿಸೋ ಅಷ್ಟರಲ್ಲಿ ಎಲ್ಲರ ಮುಖವಾಡ ಗೊತ್ತಾಯ್ತು. ಯಾರನ್ನು ನಂಬೋಕೆ ಸಾಧ್ಯವಿಲ್ಲ. ಮುಖ್ಯವಾಗಿ ಇನ್ನು ನಾನು ಆಟ ಶುರು ಮಾಡಿಲ್ಲ. ಧರ್ಮ ಕೀರ್ತಿ ಮಾತ್ರ ಅವರಾಗೇ ಇದ್ದರು. ಕೊನೆ ತನಕ ಹಾಗೇ ಇದ್ದರು ಎಂದಿದ್ದಾರೆ.

ಪ್ರಸ್ತುತ ಬಿಗ್‌ ಬಾಸ್‌ ಮನೆಯಲ್ಲಿ ಈಗ ಕಿಚ್ಚು ಹತ್ತಿಕೊಂಡಿದೆ. ಮಾತ್ರವಲ್ಲ ಯಮುನಾ ಅವರು ಮನೆಯಿಂದ ಆಚೆ ಹೋದ ಬಳಿಕ ವೈಲ್ಡ್‌ ಕಾರ್ಡ್‌ ಎಂಟ್ರಿ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಇನ್ನು ವೀಕ್ಷಕರು ಕೂಡ ಯಮುನಾ ಇಷ್ಟು ಬೇಗ ಹೋಗೋ ಸ್ಪರ್ಧಿ ಅಲ್ಲ. ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.

ಇದರ ಜೊತೆಗೆ, ಸಾಮಾಜಿಕ ಜಾಲತಾಣದಲ್ಲಿ ಕಿಪ್ಪಿ ಕೀರ್ತಿ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿ ಬರಬೇಕು ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಮುಗ್ಧ ಮಾತುಗಳಿಂದಲೇ ಜನಪ್ರಿಯತೆ ಗಳಿಸಿರುವ ಕೀರ್ತಿ ಅವರಿಗೆ ಬಿಗ್‌ ಬಾಸ್‌ ಚಾನ್ಸ್‌ ಕೊಡಬೇಕು ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಭಾಗ್ಯ ಯಾರಿಗೆ ಸಿಗುತ್ತೆ ಅನ್ನೋದು ಕಾದು ನೋಡಬೇಕಿದೆ.

Leave A Reply