Court order: ತಮ್ಮ ವಾಹನವನ್ನು ಬೇರೆಯವರಿಗೆ ಚಲಾಯಿಸಲು ಕೊಡುವ ಮುನ್ನ ಎಚ್ಚರಿಕೆ: ಏನಾಗುತ್ತೆ ನೋಡಿ!

Share the Article

Court order: ರಸ್ತೆ ಅಪಘಾತದಲ್ಲಿ(Road accident) ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ(family) ನ್ಯಾಯಯುತ ಪರಿಹಾರ ನೀಡದ ವಾಹನ ಮಾಲೀಕರ(Vehicle owner) ಮನೆ ಸೇರಿದಂತೆ ಎಲ್ಲ ಆಸ್ತಿ ಹರಾಜು ಹಾಕಿ ಪರಿಹಾರ(Compensation) ಒದಗಿಸುವಂತೆ ಬೆಳಗಾವಿಯ 9ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(Court) ಆದೇಶಿಸಿದೆ.

ಯಮನಾಪುರದ ನಾಗಯ್ಯ ಚಿಂತಾ 2016ರಲ್ಲಿ ರಸ್ತೆ ಬದಿ ನಿಂತಿದ್ದಾಗ ಮಾರ್ಕಂಡೇಯ ನಗರದ ನಿವಾಸಿ ಸಚಿನ ಸುರೇಶ ಸಾಖರೆ ಅವರ ಮಾಲೀಕತ್ವದ ಬೈಕ್‌ ಅನ್ನು ಬೇರೊಬ್ಬರು ಚಲಾಯಿಸುತ್ತಿದ್ದಾಗ ಡಿಕ್ಕಿ ಸಂಭವಿಸಿತ್ತು. ಅಪಘಾತದಲ್ಲಿ ಚಾಲಕ ನಾಗಯ್ಯ ಮೃತಪಟ್ಟಿದ್ದರು. ಈ ಬಗ್ಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ವಾಹನ ಮಾಲೀಕರ ವಿರುದ್ಧ ಮೃತನಕುಟುಂಬಸ್ಥರುದಾವೆ ಹೂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 2019 ಜ.1 ರಂದು ಮೃತನ ಕುಟುಂಬಕ್ಕೆ 12,64,600 ರೂ.ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ, ಈವರೆಗೂ ಹಣ ಸಂದಾಯ ಮಾಡದ ಕಾರಣ ಮತ್ತೆ ಮೇಲ್ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಲಯ ಆ.3ರಂದು 16 ಲಕ್ಷ ರೂ. ಸಂದಾಯ ಮಾಡುವಂತೆ ಹಾಗೂ ಅದಕ್ಕಾಗಿ ಆ.18ರಂದು ಸಚಿನ ಸಖಾರೆ ಅವರ ಆಸ್ತಿ ಹರಾಜು ಹಾಕುವಂತೆ ಆದೇಶಿಸಿದೆ ಎಂದು ಅರ್ಜಿದಾರರ ಪರ ವಕಾಲತು ವಹಿಸಿದ್ದ ವಕೀಲ ದಿನಕರ ಶೆಟ್ಟಿ ತಿಳಿಸಿದ್ದಾರೆ.

Leave A Reply