CM Siddaramayaih: ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿ ಇರ್ತಾರೆ ಅಂತ ಹೈಕಮಾಂಡ್ ಕೇಳಿ! ನನ್ನನ್ನೇನು ಕೇಳ್ತೀರಿ? – ಸತೀಶ್ ಜಾರಕಿ ಹೊಳಿ

CM Siddaramayaih: ಸಿದ್ದರಾಮಯ್ಯ ಅವ್ರೇ ಸಿಎಂ ಆಗಿ 5 ವರ್ಷ ಇರ್ತಾರೋ, 3 ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ನೀವು ಅದನ್ನ ಹೈ ಕಮಾಂಡ್(High command) ಗೆ ಕೇಳಿ. ಆದ್ರೆ ಸಿದ್ದರಾಮಯ್ಯ ಅವ್ರೇ ನಮ್ಮ ಮುಖ್ಯಮಂತ್ರಿಗಳು(CM). ಇದರಲ್ಲಿ ಬೇರೆ ಯಾವುದೇ ಪ್ರಶ್ನೆ ಇಲ್ಲ ಎಂದು ಇಂದು ಮೈಸೂರಿನಲ್ಲಿ(Mysore) ಶಾಸಕ ಸತೀಶ್ ಜಾರಕಿಹೊಳಿ(Sathish Jarakiholi)ಸ್ಪಷ್ಟಪಡಿಸಿದರು.
ನಾನು ಅವ್ರ ಜೊತೆಯಲ್ಲಿ ಸಚಿವನಾಗಿ ಕೆಲಸ ಮಾಡುತ್ತೇನೆ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂತಾ ಯಾವುದೇ ಚರ್ಚೆಗಳೂ ನಡೆದಿಲ್ಲ. ವಿಪಕ್ಷಗಳು, ಮಾಧ್ಯಮಗಳು, ಚರ್ಚೆ ಮಾಡುತ್ತಿವೆ.ವವಿಪಕ್ಷಗಳ ನಾಯಕರು ಪ್ರೀತಿಯಿಂದ ನಮ್ಮ ಹೆಸ್ರು ಹೇಳುತ್ತಿದ್ದಾರೆ ಅಷ್ಟೇ. ಆದ್ರೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ ಬೆಳವಣಿಗೆ ನಡೆದಿಲ್ಲ ಎಂದರು.
ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟ ಪಡಿಸಿದ್ದೇನೆ. ಅವ್ರ ಬೆಂಬಲಿಗರು ಅವ್ರ ನಾಯಕರಿಗೆ ಮುಂದಿನ ಸಿಎಂ ಎಂದು ಜೈಕಾರ ಹಾಕೋದು ಸರ್ವೆ ಸಾಮಾನ್ಯ. ಅದನ್ನೇ ಇಟ್ಕೊಂಡು ಎನೂ ಬದಲಾವಣೆ ಆಗುತ್ತೇ ಅನ್ನೋದು ಸರಿಯಲ್ಲ. ಡಿ ಕೆ ಶಿವಕುಮಾರ್ ವಿಚಾರ, ಮತ್ತೊಬ್ಬರ ವಿಚಾರ ನಾನು ಹೇಳಲು ಆಗೋದಿಲ್ಲ.
ರಾಜಕಾರಣಿಗಳು ಸೇರಿದಾದ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತೇವೆ ಅದ್ರಲ್ಲಿ ವಿಶೇಷ ಎನೂ ಇಲ್ಲ. ಇವತ್ತಿನ ಮೈಸೂರು ಬೇಟೆಯಲ್ಲಿ ಮಹತ್ತರ ವಿಚಾರ ಇಲ್ಲ. ಇಡೀ ದಿನ ಮೈಸೂರಲ್ಲಿ ಓಡಾಡಿಕೊಂಡು ದಸರಾ ನೋಡುತ್ತೇನೆ ಅಷ್ಟೇ. ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.