Casteist slurs: ಜಾತಿ‌ ನಿಂದನೆ- ಅರ್ಚಕ ಬಂಧನ

Share the Article

Casteist slurs: ದೇವಸ್ಥಾನದ(Temple) ಹುಂಡಿ ಮುಟ್ಟಿದಕ್ಕೆ ಅರ್ಚಕನಿಂದ ಜಾತಿ ನಿಂದನೆ ಆರೋಪ ಕೇಳಿ ಬಂದ ಹಿನ್ನೆಲೆ ತುಮಕೂರಿನ(Tumakur) ಕುಣಿಗಲ್ ತಾಲೂಕಿನ ಬೆಟ್ಟದ ರಂಗಸ್ವಾಮಿ ದೇವಸ್ಥಾನ ಅರ್ಚಕ ರಾಕೇಶ್ ಎಂಬುವವರನ್ನು ಬಂದಿಸಲಾಗಿದೆ. ಇವರು ಇದೇ ದೇವಸ್ಥಾನದ ಭದ್ರತಾ ಸಿಬ್ಬಂದಿ(Security Guard) ಪಾರ್ಥರಾಜುಗೆ ಜಾತಿ ನಿಂದನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ.

ದೇವಸ್ಥಾನ ಹುಂಡಿ ಎತ್ತಿಕೊಂಡು ಹಾಲ್ ನಲ್ಲಿ ಇಟ್ಟಿದಕ್ಕೆ ಆಕ್ಷೇಪ ಎತ್ತಿ ಜಾತಿ ನಿಂದನೆ ಅರ್ಚಕ ಜಾತಿ ನಿಂದನೆ ಮಾಡಿದ್ದಾರೆ ಎಂದಯ ತಿಳಿದು ಬಂದಿದೆ. ಅಲ್ಲದೆ ಪಾರ್ಥರಾಜುಗೆ ಕೋಲಿನಿಂದ ಹಲ್ಲೆಯನ್ನೂ ಅರ್ಚಕ ರಾಕೇಶ್ ಮಾಡಿದ್ದಾರೆ ಎಂಬ ಆರೋಪವೂ ಇದೆ. ಪಾರ್ಥರಾಜು ದೂರು ನೀಡಿದ ಹಿನ್ನೆಲೆ ಕುಣಿಗಲ್ ಪೊಲೀಸರಿಂದ ಅರ್ಚಕನನ್ನು ಬಂಧಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave A Reply