Mangaluru: ಹಾಸ್ಟೆಲ್ ಬಳಿ ಯುವಕನೋರ್ವನ ಬೆತ್ತಲೆ ಓಡಾಟ

Mangaluru: ಮಂಗಳೂರಿನ ಕೆಪಿಟಿ ಬಳಿ ಇರುವ ದೇವರಾಜ ಅರಸು ಮಹಿಳಾ ವಿದ್ಯಾರ್ಥಿನಿ ನಿಲಯದ ಬಳಿ ಯುವಕನೋರ್ವನ ಓಡಾಟ ಕಂಡು ಬಂದಿದ್ದು, ಈತ ಬೆತ್ತಲಾಗಿ ಓಡಾಡುತ್ತಿರುವ ಕುರಿತು ವರದಿಯಾಗಿದ್ದು, ವಿದ್ಯಾರ್ಥಿನಿಯರು ಬೆಚ್ಚಿ ಬೀಳುವಂತಹ ಪ್ರಸಂಗ ಉಂಟಾಗಿದೆ.
ಈತ ರಾತ್ರಿಯಾಗುತ್ತಿದ್ದಂತೆ ಬೆತ್ತಲಾಗಿ ಓಡಾಡುವುದು ಕಂಡು ಬಂದಿದ್ದು, ಅಸಭ್ಯವಾಗಿ ವರ್ತಿಸುತ್ತಿರುವ ಕುರಿತು ವರದಿಯಾಗಿದೆ. ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಭಯಗೊಂಡಿದ್ದು, ಈ ಘಟನೆ ಕಳೆದ ಎರಡು ಮೂರು ವಾರದಿಂದ ಕಂಡು ಬಂದಿದೆ. ಒಂದು ದಿನ ಈತ ಹಾಸ್ಟೆಲ್ ಆವರಣಕ್ಕೆ ಕೂಡಾ ನುಗ್ಗಿದ ಕುರಿತು ವರದಿಯಾಗಿದೆ.
ಈ ಕಾಮುಕನಿಂದ ವಿದ್ಯಾರ್ಥಿನಿಯರು ತೀವ್ರ ಭಯಗೊಂಡಿದ್ದು, ವಾರ್ಡನ್ ಇಲ್ಲದೇ ಇರುವುದರಿಂದ ಇವರು ಇನ್ನೂ ಕೂಡಾ ಆತಂಕಗೊಂಡಿದ್ದಾರೆ.