Dakshina Kannada: ಮೊಯ್ದೀನ್‌ ಬಾವಾ ಸೋದರ ಮುಮ್ತಾಜ್‌ ಅಲಿ ಆತ್ಮಹತ್ಯೆ ಪ್ರಕರಣ; ಸ್ಫೋಟಕ ಮಾಹಿತಿ ನೀಡಿದ ಮಂಗಳೂರು ಕಮಿಷನರ್

Share the Article

Dakshina Kannada: ಕಳೆದ 28 ಗಂಟೆಗಳ ಕಾರ್ಯಾಚರಣೆ ಮಾಡಿ, ಮಾಜಿ ಶಾಸಕ ಮೊಯ್ದೀನ್‌ ಬಾವಾ ಅವರ ಸಹೋದರ ಮುಮ್ತಾಜ್‌ ಅಲಿ ಅವರ ಮೃತದೇಹವು ಇಂದು ಕೂಳೂರಿನ ಸೇತುವೆ ಬಳಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಅವರು ಸ್ಫೋಟ ಮಾಹಿತಿಯನ್ನು ನೀಡಿದ್ದಾರೆ.

ʼಸೆಕ್ಸ್‌ ವೀಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡಲಾಗಿದೆ ಎಂಬ ದೂರು ಬಂದಿದ್ದು, ಆರೋಪಿಗಳು ದೇಶಬಿಟ್ಟು ಹೋಗದಂತೆ ಎಲ್‌ಒಡಿ ಜಾರಿ ಮಾಡಿದ್ದೇವೆ. ಮುಮ್ತಾಜ್‌ ಅಲಿ ಅವರು ನದಿಗೆ ಹಾರಿರುವ ಕುರಿತು ಮಾಹಿತಿ ಬಂದಿತ್ತು. ಅವರ ಮೃತದೇಹ ಇಂದು ಬೆಳಗ್ಗೆ 10 ಗಂಟೆಗೆ ಪತ್ತೆಯಾಗಿದೆ. ಮುಮ್ತಾಜ್‌ ಅಲಿ ಸಹೋದರ ಮೊಯಿದ್ದೀನ್‌ ಬಾವಾ ಅವರು ಇದೊಂದು ಹನಿಟ್ರ್ಯಾಪ್‌ ಕೇಸ್‌ ಎಂದು ಕಾವೂರು ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಿದರು.

ಮೂರು ತಿಂಗಳಿನಿಂದ ಖಿನ್ನತೆಯಲ್ಲಿದ್ದಿದ್ದು, ಸೆಕ್ಸ್‌ ವೀಡಿಯೋ ಆಧಾರದಲ್ಲಿ ಹಣಕ್ಕಾಗಿ ಬೆದರಿಕೆ ಹಾಕಿರುವ ಕುರಿತು ಉಲ್ಲೇಖ ಮಾಡಲಾಗಿದೆ. ಆರೋಪಿಗಳ ಹುಡುಕಾಟಕ್ಕೆ ತಂಡ ರಚಿಸಲಾಗಿದೆ. ವಾಯ್ಸ್‌ನೋಟೊಂದು ಪತ್ತೆಯಾಗಿದ್ದು, ಇದರಲ್ಲಿ ಮುಮ್ತಾಜ್‌ ಅಲಿ ಅವರು ಸತ್ತಾರ್‌ ಎಂಬತನ ಕುರಿತು ಹೇಳಿದ್ದಾರೆ. ಆರೋಪಿ ರೆಹಮತ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಆರು ಜನರ ಮೇಲೆ ಕಾವೂರು ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಆತ್ಮಹತ್ಯೆ ಮೊದಲು ಮುಮ್ತಾಜ್‌ ಅಲಿ ಅವರ ಕಾರು ಬಸ್‌ವೊಂದಕ್ಕೆ ಡಿಕ್ಕಿಯಾಗಿದ್ದು, ಬಸ್‌ನವರ ಹೇಳಿಕೆ ಪಡೆಯಲಾಗಿದೆ ಎಂದು ಹೇಳಿದರು.

Leave A Reply