By election: ದೆಹಲಿಯಲ್ಲಿ ಸೈನಿಕನ ಆಟ ಶುರು: ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗಾಗಿ ಲಾಬಿ: ಟಿಕೆಟ್ ಬಿಜೆಪಿಗಾ? ಇಲ್ಲಾ ಜೆಡಿಎಸ್ ಗಾ?

By election: ಹೈಕಮಾಂಡ್ ಬುಲಾವ್ ಹಿನ್ನಲೆ ಸಿಪಿ ಯೋಗಿಶ್ವರ್ ದೆಹಲಿಗೆ ತೆರಳಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅಗರವಾಲ್ ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ದೆಹಲಿಗೆ ತೆರಳಿರುವ ಯೋಗಿಶ್ವರ್ ಜೊತೆ ಕೆಲ ಸಮಯ ಅಗರವಾಲ್ ಚರ್ಚೆ ನಡೆಸಲಿದ್ದಾರೆ.

ಕಳೆದ ವಾರ ಎಚ್ ಡಿ ಕೆ, ನಿಖಿಲ್ ಕುಮಾರ್ ಸ್ವಾಮಿ ಅಗರವಾಲ್ ರನ್ನು ಭೇಟಿಯಾಗಿದ್ರು. ಚನ್ನಪಟ್ಟಣ ಉಪ ಚುನಾವಣೆಗೆ ನಿಖಿಲ್ ಸ್ಪರ್ಧೆಗೆ ಹೆಚ್ಚು ಒಲವು ತೋರಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಜೆಡಿಎಸ್ ತೀರ್ಮಾನವೇ ಅಂತಿಮ ಎಂದಿದೆ. ಆದ್ರೆ ವಾಸ್ತವದ ಪರಿಸ್ಥಿತಿಯನ್ನು ಕುಮಾರಸ್ವಾಮಿಗೆ ಬಿಜೆಪಿ ನಾಯಕರು ವಿವರಿಸಿದ್ದಾರೆ ಎನ್ನಲಾಗಿದೆ.

ಮೊನ್ನೆ ಕುಮಾರಸ್ವಾಮಿ ಹಾಗೂ ನಿಖಿಲ್ ಅಗರವಾಲ್ ರನ್ನ ಭೇಟಿ ಮಾಡಿದ್ರು. ಅವರ ಭೇಟಿ ಬಳಿಕವೇ ಸಿ ಪಿ ಯೋಗೇಶ್ವರ್ ಅವರನ್ನು ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆ ನೀಡಿದೆ.

ಬಿಜೆಪಿ ಹೈಕಮಾಂಡ್ ಯೋಚನೆ ಏನು?
– ಕುಮಾರಸ್ವಾಮಿ ಕ್ಷೇತ್ರ ಆದ್ರಿಂದ ಕುಮಾರಸ್ವಾಮಿ ತೀರ್ಮಾನಕ್ಕೆ ಮಹತ್ವ ನೀಡೊಣ‌..
– ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡುತ್ತೇನೆ ಎಂದು ಕುಮಾರಸ್ವಾಮಿ ನಿರ್ಣಯ ಮಾಡಿದರೆ ಹೈಕಮಾಂಡ್ ಓಕೆ ಎನ್ನಲಿದೆ?
– ಆದರೆ ನಿಖಿಲ್ ಕುಮಾರಸ್ವಾಮಿ ಬಿಟ್ಟು ಬೇರೆ ಯಾರಿಗಾದರೂ ಟಿಕೆಟ್ ನೀಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರೆ, ಆಗ ಸಿಪಿ ಯೋಗಿಶ್ವರ್ ಪರ ನಿಲ್ಲುವ ಯೋಚನೆಯಲ್ಲಿದೆ ಹೈಕಮಾಂಡ್.?
– ಸೂಚ್ಯವಾಗಿ ಇದೆಲ್ಲವನ್ನೂ ಸಿಪಿ ಯೋಗಿಶ್ವರ್ ಜೊತೆ ದೂರವಾಣಿ ಮೂಲಕ ಈಗಾಗಲೇ ಚರ್ಚೆ ಮಾಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್.
– ಕುತೂಹಲ ಮೂಡಿಸಿರುವ ಕುಮಾರಸ್ವಾಮಿ ನಡೆ ಹಾಗೂ ಬಿಜೆಪಿ ಹೈಕಮಾಂಡ್ ತೀರ್ಮಾನ.

Leave A Reply

Your email address will not be published.