Post office FD: ಡಬಲ್ ಪ್ರಾಫಿಟ್ ಪಡೆಯಲು ಇಲ್ಲಿ ಠೇವಣಿ ಮಾಡಿ! ಎಲ್ಲಕ್ಕಿಂತ ಬೆಸ್ಟ್‌ ಅಂಚೆ ಇಲಾಖೆಯ ಎಫ್‌ಡಿ!

Post office FD: ಕೂಡಿಟ್ಟ ಹಣದಿಂದ ಡಬಲ್ ಪ್ರಾಫಿಟ್ ಪಡೆಯಲು ಕೆಲವರು ಅಲ್ಲಿ ಇಲ್ಲಿ ಬ್ಯಾಂಕ್ ಗೆ ಅಲೆದಾಡುತ್ತಾರೆ. ಆದ್ರೆ ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಅಂಚೆ ಕಚೇರಿ ಸೂಕ್ತವಾಗಿದೆ. ಹೌದು, ಸರ್ಕಾರದ ಬೆಂಬಲಿತ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದಲ್ಲಿ ನಿರ್ದಿಷ್ಟ ಅವಧಿಯ ಕೊನೆಯಲ್ಲಿ ಗ್ಯಾರಂಟಿ ರಿಟರ್ನ್ಸ್ ಪಡೆಯಲು ನೂರಕ್ಕೆ ನೂರು ಸಾಧ್ಯ ವಿದೆ. ಆದ್ದರಿಂದ ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿ ಇರಬೇಕು ಜೊತೆಗೆ ಹೆಚ್ಚಿಗೆ ಬಡ್ಡಿ ಸಿಗಬೇಕು ಎಂದರೆ, ಅಂಚೆ ಕಚೇರಿಗಿಂತಲೂ ಮತ್ತೊಂದು ಜಾಗವಿಲ್ಲ. ಹಾಗಿದ್ದರೆ ನಿಮ್ಮ ಹಣವನ್ನು ನೀವು ಎಫ್‌ಡಿ ಇಟ್ಟರೆ ಎಷ್ಟು ಹಣ ನಿಮಗೆ ಸಿಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಅಷ್ಟಕ್ಕೂ ಅಂಚೆ ಕಚೇರಿಯಲ್ಲಿ ಹಲವಾರು ಯೋಜನೆಗಳು ಇವೆ. ಆದರೆ ಇಲ್ಲಿ ನಿಮಗೆ ಸಾಮಾನ್ಯ ಬಡ್ಡಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಅಂಚೆ ಕಚೇರಿಯಲ್ಲಿ ನೀವು ಒಂದು ವರ್ಷದಿಂದ ಐದು ವರ್ಷಗಳವರೆಗೆ ಎಫ್‌ಡಿ ಇಡಬಹುದು. ಇದಕ್ಕೆ ಆದಾಯ ತೆರಿಗೆ ಕಾಯ್ದೆಯ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡಾ ಇರುತ್ತದೆ.

1 ವರ್ಷಕ್ಕೆ ನಿಮಗೆ ಶೇಕಡಾ 6.90, ಎರಡು ವರ್ಷಕ್ಕೆ ಶೇಕಡಾ 7, ಮೂರು ವರ್ಷಕ್ಕೆ 7.10% ಹಾಗೂ ಐದು ವರ್ಷಕ್ಕೆ 7.50% ಬಡ್ಡಿ ಸಿಗುತ್ತದೆ. ಇನ್ನು ಐದು ವರ್ಷಗಳವರೆಗೆ ಹೂಡಿಕೆ ಮಾಡಿದರೆ ನಿಮಗೆ ಎಲ್ಲಕ್ಕಿಂತಲೂ ಹೆಚ್ಚಿನ ಬಡ್ಡಿದರ ಅಂದರೆ 7.5% ಬಡ್ಡಿ ಸಿಗುತ್ತದೆ. ಇದು ಎಲ್ಲಾ ಬ್ಯಾಂಕ್‌ಗಳಿಗಿಂತಲೂ ಅಧಿಕ ದರ ಬಡ್ಡಿಯಾಗಿದೆ. ಅಂದರೆ, ನೀವು ಒಂದು ಲಕ್ಷ ರೂಪಾಯಿಗಳನ್ನು ಐದು ವರ್ಷಗಳವರೆಗೆ ಎಫ್‌ಡಿ ಇಟ್ಟರೆ, ನಿಮ್ಮ ಒಂದು ಲಕ್ಷಕ್ಕೆ 44,995 ರೂಪಾಯಿಗಳು ಬಡ್ಡಿ ಸಿಗುತ್ತವೆ. ಒಂದು ವೇಳೆ ನೀವು ಐದು ಲಕ್ಷ ರೂಪಾಯಿ ಐದು ವರ್ಷಕ್ಕೆ ಇಟ್ಟಿದ್ದೇ ಆದಲ್ಲಿ ನಿಮಗೆ 2 ಲಕ್ಷದ 26 ಸಾವಿರದ 647 ರೂಪಾಯಿ ಬಡ್ಡಿ ಸಿಗುತ್ತದೆ.

ಒಂದು ವೇಳೆ ಮೂರು ವರ್ಷದ ಅವಧಿಗೆ ನೀವು ಒಂದು ಲಕ್ಷ ರೂಪಾಯಿ ಎಫ್‌ಡಿ ಇಟ್ಟರೆ ನಿಮಗೆ ₹ 1,23,661 ಹಾಗೂ ಐದು ವರ್ಷಕ್ಕೆ ಇಟ್ಟರೆ ₹ 1,45,329 ಸಿಗುತ್ತದೆ.

ಎರಡು ಲಕ್ಷ ರೂಪಾಯಿಗಳನ್ನು ಮೂರು ವರ್ಷಕ್ಕೆ ಇಟ್ಟರೆ ₹ 2,47,322 ಮತ್ತು ಐದು ವರ್ಷಕ್ಕೆ ₹ 2,90,659 ಸಿಗುತ್ತದೆ.

ಇನ್ನು ಐದು ಲಕ್ಷ ರೂಪಾಯಿಯನ್ನು ಮೂರು ವರ್ಷಕ್ಕೆ ಇಟ್ಟರೆ ₹ 6,18,304 ಮತ್ತು ಐದು ವರ್ಷಕ್ಕೆ ₹ 7,26,647 ಸಿಗುತ್ತದೆ.

ಅಥವಾ ನಿಮ್ಮಲ್ಲಿ ಇನ್ನೂ ಹೆಚ್ಚಿನ ದುಡ್ಡು ಇದ್ದು, 10 ಲಕ್ಷ ರೂಪಾಯಿ ಠೇವಣಿ ಇಟ್ಟರೆ ನಿಮಗೆ ಐದು ವರ್ಷಕ್ಕೆ 14,53,294 ರೂಪಾಯಿ ಸಿಗುತ್ತದೆ.

ಹೀಗೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದಲ್ಲಿ ನಿರ್ದಿಷ್ಟ ಅವಧಿಯ ಕೊನೆಯಲ್ಲಿ ಗ್ಯಾರಂಟಿ ರಿಟರ್ನ್ಸ್ ಪಡೆಯಲು ನೂರಕ್ಕೆ ನೂರು ಸಾಧ್ಯವಿದೆ.

Leave A Reply

Your email address will not be published.