Alcohol: ಮನೆಯ ಗಂಡಸ್ರು ಕುಡಿದು ತೂರಾಡ್ತಾರಾ? ಕುಡಿತ ಬಿಡಿಸಲು ಯಾವ ಔಷಧಿ, ಕೌನ್ಸಲಿಂಗ್ ಬೇಡ; ಮನೆಯಲ್ಲಿರೋ ಇದನ್ನು ಯೂಸ್ ಮಾಡಿ, ಒಂದೇ ವಾರದಲ್ಲಿ ಬಿಟ್ಟುಬಿಡ್ತಾರೆ !!

Alcohol: ಕುಡಿತ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ಗೊತ್ತು. ಆದರೂ ಕುಡಿಯುತ್ತಾರೆ. ಕೆಲವರು ಲಿಮಿಟ್ ಅಲ್ಲಿ ಸೇವನೆ ಮಾಡಿದ್ರೆ ಇನ್ನೂ ಕೆಲವರು ಯಾವ ಲಿಮಿಟ್ ಇಲ್ಲದೆ ಬೆಳಗ್ಗಿನಿಂದ ಸಂಜೆಯ ತನಕವೂ ಮದ್ಯ(Alcohol) ಕುಡಿದು ಅದರಲ್ಲೇ ಸ್ನಾನ ಮಾಡುತ್ತಾರೆ. ಕುಡಿದು ಸಮ್ಮನಾದರೂ ಇರುತ್ತಾರೋ? ಅದೂ ಇಲ್ಲ. ಹಲವರು ಮನೆಗೆ ಹೋಗಿ ಗಲಾಟೆ ಮಾಡಿ, ಹೆಂಡತಿ ಮಕ್ಕಳಿಗೆ ಹೊಡೆದು ದಾಂದಲೆ ಮಾಡುತ್ತಾರೆ. ಇದರಿಂದ ಮನೆಯವರಿಗೂ ಪ್ರತೀದಿನ ಕಿರಿ ಕಿರಿ. ನೆಮ್ಮದಿಯೇ ಇರೋದಿಲ್ಲ.
ಮನೆಯ ಗಂಡಸರ ಈ ಕುಡಿತದ ಚಾಳಿ ಬಿಡಿಸಲು ಹೆಂಗಸರು ಪಡಬಾರದ ಕಷ್ಟ ಪಡುತ್ತಾರೆ. ಮದ್ಯವರ್ಜನ ಶಿಬಿರ, ಮಾತ್ರೆ, ಔಷಧಿ, ಮದ್ದು, ಕೌನ್ಸಲಿಂಗ್ ಎಂದೆಲ್ಲಾ ಹಲವು ಪ್ರಯೋಗ ಮಾಡುತ್ತಾರೆ. ಆದರೂ ಆ ಪುಣ್ಯಾತ್ಮರು ಇದಾವುದಕ್ಕೂ ಬಗ್ಗಲ್ಲ, ಜಗ್ಗಲ್ಲ. ಹೀಗಾಗಿ ಹೆಣ್ಮಕ್ಕಳು ಈ ಪ್ರಯತ್ನವನ್ನೇ ಬಿಟ್ಟುಬಿಡುತ್ತಾರೆ. ಆದರೆ ನಾವು ನಿಮಗೊಂದು ಟಿಪ್ಸ್ ನೀಡುತ್ತಿದ್ದೇವೆ. ಅದೇನೆಂದರೆ ಮನೆಯಲ್ಲಿರೋ ಈ ವಸ್ತು ಬಳಸಿಯೇ ನೀವು ನಿಮ್ಮ ಗಂಡಸರ ಕುಡಿತವನ್ನು ಬಿಡಿಸಬಹುದು. ಹಾಗಿದ್ರೆ ಏನದು? ತಿಳಿಯೋಣ ಬನ್ನಿ.
ಹಣ್ಣಿನ ಜ್ಯೂಸ್:
ಹಣ್ಣಿನ ಜ್ಯೂಸ್ ಕುಡಿದರೆ, ಅದು ಆಲ್ಕೋಹಾಲ್ ಗೆ ಪರ್ಯಾಯವಾಗಿ ಕೆಲಸ ಮಾಡುವುದು. ಆದರೆ ಆಲ್ಕೋಹಾಲ್ ಸೇವನೆ ಮಾಡುವವರಿಗೆ ಅವರ ಕುಡಿತದ ಸಮಯಕ್ಕೆ ಸರಿಯಾಗಿ ತಾಜಾ ಹಣ್ಣಿನ ಜ್ಯೂಸ್ ನ್ನು ಮನೆಯಲ್ಲಿ ತಯಾರಿಸಿಕೊಂಡು ಕುಡಿಸಿ, ಆಗ ಅವರಿಗೆ ಕುಡಿಯೋಕೆ ಹೋಗುವ ಮನಸ್ಸು ಬರಲ್ಲ. ಈ ಜ್ಯೂಸ್ ಗಳಲ್ಲಿ ವಿಟಮಿನ್ ಎ, ಫಾಲಟೆ, ವಿಟಮಿನ್ ಸಿ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ಪೊಟಾಶಿಯಂ ಅಂಶವಿದೆ. ಆಲ್ಕೋಹಾಲ್ ಸೇವಿಸಬೇಕು ಎಂದನಿಸಿದ ವೇಳೆ ಅವರಿಗೆ ಇದನ್ನು ಪರ್ಯಾಯವಾಗಿ ನೀಡಬೇಕು
ಖರ್ಜೂರದ ಜ್ಯೂಸ್:
ಆಲ್ಕೋಹಾಲ್ ಅಭ್ಯಾಸವಿರುವವರಿಗೆ ನೀವು ಖರ್ಜೂರವನ್ನು ಆಹಾರ ಕ್ರಮದಲ್ಲಿ ನಿತ್ಯವೂ ಕೊಡಬೇಕು. ಇದು ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ಯಕೃತ್ ನ್ನು ಶುದ್ಧೀಕರಿಸುವುದು. ಒಂದು ಗಂಟೆ ಕಾಲ ಸ್ವಲ್ಪ ನೀರಿನಲ್ಲಿ ಖರ್ಜೂರವನ್ನು ಹಾಗೆ ನೆನೆಯಲು ಹಾಕಿ ಮತ್ತು ಇದರ ಬಳಿಕ ಬೀಜ ತೆಗೆದು ಅದನ್ನು ಜಜ್ಜಿಕೊಳ್ಳಿ. ಈ ನೀರನ್ನು ದಿನದಲ್ಲಿ ಎರಡು ಸಲ ಕುಡಿಸಿರಿ.
ದ್ರಾಕ್ಷಿ ಜ್ಯೂಸ್:
ಆಲ್ಕೋಹಾಲ್ ದುರಾಭ್ಯಾಸವನ್ನು ದೂರ ಮಾಡುವ ನೈಸರ್ಗಿಕ ವಿಧಾನವೆಂದರೆ, ಅದು ದ್ರಾಕ್ಷಿ. ಆಲ್ಕೋಹಾಲ್ ಸೇವನೆ ಮಾಡುವವರಿಗೆ ದಿನನಿತ್ಯ ಒಂದು ಲೋಟ ದ್ರಾಕ್ಷಿ ಜ್ಯೂಸ್ ಕುಡಿಯಲು ಕೊಡಿ ಅಥವಾ ದ್ರಾಕ್ಷಿ ಹಣ್ಣು ಕೊಡಿ. ವೈನ್ ತಯಾರಿಸಲು ದ್ರಾಕ್ಷಿಯನ್ನು ಬಳಸುವ ಕಾರಣದಿಂದಾಗಿ ಇದು ಆಲ್ಕೋಹಾಲ್ ಗೆ ಒಳ್ಳೆಯ ಪರಿಹಾರ. ಇದರಲ್ಲಿ ಪೊಟಾಶಿಯಂ ಅಧಿಕವಾಗಿದ್ದು, ದೇಹದಲ್ಲಿ ಕ್ಷಾರೀಯ ರಕ್ತ ಸಮತೋಲನ ಕಾಪಾಡುವುದು. ಯಕೃತ್ ನಲ್ಲಿ ಇರುವ ವಿಷಕಾರಿ ಅಂಶಗಳನ್ನು ಇದು ತುಂಬಾ ಪರಿಣಾಮಕಾರಿ ಆಗಿ ಹೊರಗೆ ಹಾಕಲು ನೆರವಾಗುವುದು.
ಕ್ಯಾರೆಟ್ ಜ್ಯೂಸ್:
ಆಲ್ಕೋಹಾಲ್ ಕುಡಿಯುವವರಿಗೆ ಆರೋಗ್ಯಕಾರಿ ಆದ ಕ್ಯಾರೆಟ್ ಜ್ಯೂಸ್ ನ್ನು ಒಂದು ಲೋಟ ಕುಡಿಯಲು ಕೊಡಿ. ಇದರಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಪೋಷಕಾಂಶಗಳು ಇವೆ. ಇದು ಆಲ್ಕೋಹಾಲ್ ಕುಡಿಯಬೇಕು ಎನ್ನುವ ಬಯಕೆಯನ್ನು ಕಡಿಮೆ ಮಾಡುವುದು. ಇದರಿಂದ ಜೀರ್ಣಕ್ರಿಯೆಯು ಉತ್ತಮವಾಗುವುದು ಹಾಗೂ ಆಲ್ಕೋಹಾಲ್ ಚಟವು ಕಡಿಮೆ ಆಗುವುದು. ನಿತ್ಯವೂ ಒಂದು ಲೋಟ ಕ್ಯಾರೇಟ್ ಜ್ಯೂಸ್ ಕುಡಿದರೆ, ಅದು ತುಂಬಾ ಪರಿಣಾಮಕಾರಿ ಆಗಿರುವುದು.
ಹಾಗಲಕಾಯಿ ಜ್ಯೂಸ್:
ಅತಿಯಾಗಿ ಮದ್ಯ ಸೇವನೆ ಮಾಡಿದರೆ, ಅದರಿಂದ ಯಕೃತ್ ಗೆ ಆಗುವ ಹಾನಿಯನ್ನು ಹಾಗಲಕಾಯಿ ಜ್ಯೂಸ್ ಕಡಿಮೆ ಮಾಡುವುದು. ಈ ನೈಸರ್ಗಿಕ ಜ್ಯೂಸ್ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು. ಕೆಲವು ಹಾಗಲಕಾಯಿ ಎಲೆಗಳನ್ನು ಮೂರು ಚಮಚ ಮಜ್ಜಿಗೆ ಜತೆಗೆ ಬೆರೆಸಿ ಜ್ಯೂಸ್ ಮಾಡಿ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿರುವಾಗ ಅವರಿಗೆ ಕುಡಿಸಿರಿ, ಆಗ ಆಲ್ಕೋಹಾಲ್ ಚಟ ದೂರ ಮಾಡಬಹುದು.
You actually make it seem so easy with your presentation but I find this topic to be actually something which I think I would never understand. It seems too complicated and very broad for me. I am looking forward for your next post, I will try to get the hang of it!