Bigg boss kannada: ಬಿಗ್‌ಬಾಸ್ ವಾರದ ಕಥೆ ಕಿಚ್ಚನ ಜೊತೆ: ಕಿಚ್ಚನ ಮುಂದೆ ಬಾಲ ಬಿಚ್ಚಿದ್ರ ಲಾಯರ್ ಜಗದೀಶ್?!

Share the Article

Bigg boss kannada: ಬಿಗ್ ಬಾಸ್ ಕನ್ನಡ ಸೀಸನ್ 11 (Bigg boss kannada) ಹವಾ ಜೋರಾಗಿಯೇ ಇದೆ. ಇದೀಗ ಬಿಗ್ ಬಾಸ್ ಆರಂಭವಾಗಿ ಒಂದು ವಾರವೇ ಆಗಿದೆ. ಎಂದಿನಂತೆ ಬಿಗ್‌ಬಾಸ್ ವಾರದ ಕಥೆ ಕಿಚ್ಚನ ಜೊತೆ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಾರಗಳ ಕಾಲ ನಾನೇ ಎಲ್ಲಾ ಎಂದು ಜಂಭ ತೋರಿಸುತ್ತಿದ್ದ ಜಗದೀಶ್ ಬಾಲವನ್ನು ಕಿಚ್ಚ ಮಾತಿನಲ್ಲೇ ಕತ್ತರಿಸಿದ್ದಾರೆ.

ಹೌದು, ಮನೆಯಲ್ಲಿ ಒಂದು ವಾರ ಹೆಚ್ಚು ನಿಯಮ ಉಲ್ಲಂಘನೆ ಮಾಡಿದ್ದು ಅಲ್ಲದೇ ಬಾಯಿಗೆ ಬಂದಂತೆ ಮಾತನಾಡಿ ಗಲಾಟೆ ಮಾಡಿದ ಕುರಿತು ಲಾಯರ್‌ ಜಗದೀಶ್‌ಗೆ ಸುದೀಪ್ ಅವರು ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಿಚ್ಚ ಮಾತು ಶುರು ಮಾಡುತ್ತಲೇ, ನಾನು ಕಾನೂನನ್ನು ಗೌರವಿಸುವವನು, ಕಾನೂನು ಪಾಲನೆ ಮಾಡುವವನು. ನಾನು ಸಿಎಂ ಆಗೋನು ಅಂತೆಲ್ಲಾ ಈ ಮನೆಯಲ್ಲಿ ಹೇಳುತ್ತೀರಲ್ವಾ. ಬಿಗ್‌ಬಾಸ್ ಮನೆಯಲ್ಲಿ ನಿಯಮ ಮಾಡಿದ್ದಾರೆಂದರೆ ಅದು ಕೂಡ ಒಂದು ಕಾನೂನು. ನೀವು ಅದನ್ನು ಫಾಲೋ ಮಾಡುತ್ತಿಲ್ಲ ಎಂದರೆ ಈ ಬಗ್ಗೆ ಏನು ಹೋಳೋಣ ಎಂದು ಜಗದೀಶ್ ಗೆ ಪ್ರಶ್ನೆ ಮಾಡಿದ್ದಾರೆ.

ಒಬ್ಬ ಸಿಎಂ ಆಗೋರು ಎಲ್ಲಾ ರೀತಿಯ ವ್ಯಕ್ತಿತ್ವದ ವ್ಯಕ್ತಿಗಳನ್ನು ನೋಡಲ್ಲ ಎಂದು ಅಂದುಕೊಂಡಿದ್ದೀರಿಯೇ? ನೀವು ಕಾನೂನು ಪಾಲಿಸುವವರು. ಬಿಗ್‌ಬಾಸ್‌ ಮನೆಯಲ್ಲಿ ನಿಯಮಗಳನ್ನು ಫಾಲೋ ಮಾಡದವರು ಕರ್ನಾಟಕ ಸಿಎಂ ಆದ್ರೆ ಹೇಗೆ ರೂಲ್ ಫಾಲೋ ಮಾಡ್ತೀರಾ? ಕ್ರಿಮಿನಲ್‌ ಗೂ ಕ್ರಮಿನಲ್ ಲಾಯರ್‌ ಗೂ ವ್ಯತ್ಯಾಸ ಇದೆ ಸರ್‌ ಎಂದು ಜಗದೀಶ್ ಗೆ ಪ್ರಶ್ನೆ ಮಾಡಿದ್ದಾರೆ.

ಸುದೀಪ್ ಮಾತಿಗೆ ಜಗದೀಶ್, ನೀವು ಹೇಳೋದು ಕರೆಕ್ಟ್ ಇದೆ. ನಿಮ್ಮದೇನು ತಪ್ಪಿಲ್ಲ ಎಂದರು. ಇದಕ್ಕೆ ಕೌಂಟರ್ ಕೊಟ್ಟ ಕಿಚ್ಚ ಖಡಾಖಂಡಿತವಾಗಿ ಕರೆಕ್ಟ್‌ ಆಗಿದೆ ಇಲ್ಲಾಂದ್ರೆ ನನ್ ಮಗನ್ 11 ನೇ ಸೀಸನ್ ದಾಟುತ್ತಾನೆ ಇರಲಿಲ್ಲ ಎಂದರು, ಜೊತೆಗೆ ಸೀಸನ್‌ 11 ರಲ್ಲಿ 11 ಇದೆ ಜಗದೀಶ್ ಅವರೇ ಅದರಲ್ಲಿ 1 ನೀವು ಈ ಎರಡು 1+1 ಸೇರಿದ್ರೆ 11 ಅದು ನಾನು ಎಂದು ಕೌಂಟರ್ ಕೊಟ್ಟರು. ಸ್ಪರ್ಧಿಗಳು ಗೌರವ ಕೊಟ್ಟಿಲ್ಲ ಎಂಬುದು ನಿಮ್ಮ ಮಾತಾದರೆ, ಅವರು ಗೌರವ ನೀಡಿದ್ದಾರೆ. ಗೌರವ ಕೊಡುತ್ತಿದ್ದಾಗ ಯದ್ವಾ ತದ್ವಾ ವರ್ತನೆ ತೋರಿಸಿದ್ರೆ ಸಹಜವಾಗಿ ಅದನ್ನು ಕಳೆದುಕೊಳ್ಳುತ್ತೀರಿ. ಇನ್ನು ಹೆಣ್ಣು ಮಕ್ಕಳ ವಿಚಾರದಲ್ಲಿ ಆ ತರ ಮಾತನಾಡಿದ್ದು ಸರಿ ಇಲ್ಲ ಎಂದು ಕೂಡ ಸುದೀಪ್ ಹೇಳಿದರು.

ಬಿಗ್ಬಾಸ್‌ ಬೇಕು ಅಂತ ನೀವೇ ಒಳಗೆ ಬಂದಿದ್ದು, ಅವರನ್ನೇ ನೀವು ಕೆಳಗಿಟ್ಟು ಬಿಟ್ರೆ, ಶೋ ನಡೆಸಲು ಬಿಡಲ್ಲ ಎಂದು ಚಾಲೆಂಜ್‌ ಮಾಡಿದ್ರೆ, ಆದ್ರೆ ನೀವು ಕ್ಯಾಮಾರಾ ಮುಂದೆ ಮಾಡಿದ್ದು ತಪ್ಪೇ ಅಲ್ಲ ಸರ್‌, ಜೋಕು ಅಂತ ನಕ್ಕ ಸುದೀಪ್ ಈ ಜೋಕ್ ಮಾಡೋಕೆ ಯಾರಾದ್ರೂ 11 ವರ್ಷ ಯಾಕೆ ತಕೊಂಡ್ರು ಅಂತ ನಕ್ಕರು. ಈ ತರದ ವಾರ ನಾವು ಶೋ ಮುಗಿತಾ ಬರುವಾಗ ನೋಡಿದ್ದೇವೆ. ಆದರೆ ಅದನ್ನು ಈ ಸೀಸನ್‌ ನಲ್ಲಿ ಮೊದಲ ವಾರವೇ ನೋಡಿದ್ದೇವೆ ಸರ್‌. ನಿಮ್ಮಲ್ಲಿ ಒಳ್ಳೆಯ ಸಾಮಥ್ಯ ಇದೆ. ಎಲ್ಲವೂ ಇದ್ದರೆ ಚಂದ ಎಂದು ಜಗದೀಶ್ ಬುದ್ದಿ ಹೇಳಿದರು. 

ಬಿಗ್ ಬಾಸ್ ಶೋ ಹಾಳು ಮಾಡೋಕೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್‌ ಹೇಳಿದ್ದು, ಇಷ್ಟೆಲ್ಲಾ ಆದಮೇಲೆ ಕೊನೆಗೆ ಕಾರ್ಯಕ್ರಮದಲ್ಲಿ ಬೇಕುಂತಲೇ ನಾನು ಹಾಗೆ ಮಾಡಿದೆ. ಎಲ್ಲರೂ ಮುಖವಾಡ ಹಾಕಿಕೊಂಡಿದ್ದಾರೆ ಅದನ್ನು ಕಳಚಲು ಮಾಡಿದೆ ಎಂದು ಲಾಯರ್ ಜಗದೀಶ್ ತಾನು ಮಾಡಿದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.

Leave A Reply