Sukanya samrudhi scheme: ಹೆಣ್ಣು ಮಕ್ಕಳ ಪೋಷಕರ ಗಮನಕ್ಕೆ, ಸುಕನ್ಯಾ ಸಮೃದ್ಧಿ ನಿಯಮದಲ್ಲಿ 6 ಬದಲಾವಣೆ ಮಾಡಿದ ಸರ್ಕಾರ!
Sukanya samrudhi scheme: ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya samrudhi scheme) ಪ್ರಾರಂಭಿಸಲಾಗಿದ್ದು, ಈ ಖಾತೆಯನ್ನು ಮಗಳು ಹುಟ್ಟಿದ ಸಮಯದಲ್ಲಿ ಅಥವಾ ಆಕೆಗೆ 10 ವರ್ಷ ತುಂಬುವುದರೊಳಗೆ ತೆರೆಯಬಹುದು. ನಂತರ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಅವಕಾಶ ಇಲ್ಲ ಎಂಬ ನಿಯಮ ಇದೆ.
ಆದ್ರೆ ಈ ಯೋಜನಗೆ ಸಂಬಂಧಿಸಿದಂತೆ ಇದೀಗ ಆರು ನಿಯಮಗಳನ್ನು ಬದಲಾಯಿಸಲಾಗಿದ್ದು,ಬದಲಾಗಿರುವ ನಿಯಮವನ್ನು ಹೆಣ್ಣು ಮಕ್ಕಳ ಪೋಷಕರು ತಿಳಿದುಕೊಳ್ಳುವುದು ಅವಶ್ಯಕ.
ಹೊಸ ನಿಯಮದ ಪ್ರಕಾರ, ಹೆಣ್ಣುಮಗುವಿಗೆ 18 ವರ್ಷವಾಗುವವರೆಗೆ ಖಾತೆಯನ್ನು ಮಗುವಿನ ಪೋಷಕರು ಮತ್ತು ಕಾನೂನು ಪಾಲಕರೇ ನಿರ್ವಹಿಸಬೇಕು.
ಹೆಣ್ಣು ಮಕ್ಕಳ ಕಾನೂನು ಪಾಲಕರು ಖಾತೆಯನ್ನು ನಿರ್ವಹಿಸದಿದ್ದರೆ,ಈ ಖಾತೆಯನ್ನು ಮುಚ್ಚಬಹುದು. ಮೊದಲು ಈ ಖಾತೆಯನ್ನು ಮಗಳ ಮರಣ ಅಥವಾ ನಿವಾಸದ ವಿಳಾಸವನ್ನು ಬದಲಾಯಿಸಿದಾಗ ಮುಚ್ಚುವ ಅವಕಾಶ ಇತ್ತು. ಈಗ ಖಾತೆದಾರರ ಮಾರಣಾಂತಿಕ ಕಾಯಿಲೆಯ ಸಂದರ್ಭದಲ್ಲಿಯೂ ಇದನ್ನು ಕ್ಲೋಸ್ ಮಾಡುವ ಅವಕಾಶ ನೀಡಲಾಗಿದೆ.
ಅದಲ್ಲದೆ ಈಗ ಮೂರನೇ ಮಗಳ ಹೆಸರಿನಲ್ಲಿಯೂ ಖಾತೆ ತೆರಬಹುದು. ಅಂದರೆ ತಾಯಿಗೆ ಮೊದಲ ಹೆರಿಗೆಯಲ್ಲಿ ಇಬ್ಬರೂ ಅವಳಿ ಹೆಣ್ಣು ಮಕ್ಕಳು ಜನಿಸಿ, ಎರಡನೇ ಹೆರಿಗೆಯಲ್ಲಿಯೂ ಹೆಣ್ಣು ಮಗು ಜನಿಸಿದ್ದರೆ ಆ ಮಗುವಿನ ಹೆಸರಿನಲ್ಲಿಯೂ ಖಾತೆ ತೆರೆಯಬಹುದು.
ಹೊಸ ನಿಯಮಗಳ ಪ್ರಕಾರ, ಹೆಣ್ಣುಮಕ್ಕಳು 18 ವರ್ಷಕ್ಕಿಂತ ಮೊದಲು ಸುಕನ್ಯಾ ಸಮೃದ್ಧಿ ಖಾತೆಯನ್ನು ನಿರ್ವಹಿಸಲು ಅನುಮತಿಸುವುದಿಲ್ಲ.18 ವರ್ಷ ವಯಸ್ಸಿನವರೆಗೆ, ಖಾತೆಯನ್ನು ಕಾನೂನು ಪಾಲಕರು ಮಾತ್ರ ನಿರ್ವಹಿಸುತ್ತಾರೆ.
ಸುಕನ್ಯಾ ಸಮೃದ್ಧಿ ಯೋಜನೆ (SSY) ಅಡಿಯಲ್ಲಿ ಮಾಡಿದ ಹೂಡಿಕೆಗಳ ಮೇಲೆ ಸ್ವೀಕರಿಸುವ ಬಡ್ಡಿಯ ಮೊತ್ತವನ್ನು ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲಿಸುತ್ತದೆ. ಮತ್ತು ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಬಡ್ಡಿ ದರವನ್ನು ವಾರ್ಷಿಕ 8.2% ನಂತೆ ಕಾಯ್ದುಕೊಳ್ಳಲಾಗಿದೆ.