Satish Jarakiholi: ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಮುಂದಿನ ಸಿಎಂ ಯಾರೆಂಬುದನ್ನು ಬಹಿರಂಗಗೊಳಿಸಿದ ಸತೀಶ್ ಜಾರಕಿಹೊಳಿ!!

Satish Jarakiholi: ಸಿದ್ದರಾಮಯ್ಯ ಅವರ ಪತ್ನಿ ಮುಡಾ ಸೈಟ್ ಗಳನ್ನು ವಾಪಸ್ಸು ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ(CM Siddaramaiah)ರಾಜೀನಾಮೆ ನೀಡುವಂತೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಮುಂದಿನ ಸಿಎಂ ಯಾರನ್ನು ಮಾಡುವುದು ಎಂಬ ಚರ್ಚೆಯನ್ನು ಮಾಡುತ್ತಿದೆ. ಇದೀಗ ಈ ಬಗ್ಗೆ ಸತೀಶ್ ಜಾರಕಿಹೊಳಿ(Satish Jarakiholi) ಸ್ಫೋಟಕ ಹೇಳಿಕೆ ನೀಡಿದ್ದಾರೆ.

 

ಮುಡಾ ಹಗರಣವು ರಾಜ್ಯದಲ್ಲಿ ವಿಚಿತ್ರ ಬೆಳವಣಿಗೆ ಪಡೆದ ಹಿನ್ನೆಲೆಯಲ್ಲಿ, ಸಿಎಂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪಟ್ಟು ಹಿಡಿದ ಸಂದರ್ಭದ ಸಂದರ್ಭದಲ್ಲೇ ದಲಿತ ಸಚಿವರಾದ ಗೃಹ ಸಚಿವ ಜಿ ಪರಮೇಶ್ವರ್, ಮಹದೇವಪ್ಪ, ಹಾಗೂ ಸತೀಶ್ ಜಾರಕಿಹೊಳಿ ಸೀಕ್ರೆಟ್ ಸಭೆಯನ್ನು ನಡೆಸಿದ್ದಾರೆ. ಸಭೆಯ ಬಳಿಕ ಮುಂದಿನ ಸಿಎಂ ಯಾರು ಎಂಬುದರ ಬಗ್ಗೆ ಮಾತನಾಡಿದ ಜಾರಕಿಹೊಳಿ ಅವರು ‘ಮುಡಾ ಕೇಸ್ ನಲ್ಲಿ ಸಿಎಂ ರಾಜೀನಾಮೆ ನೀಡುತ್ತಾರೆ ಎಂದು ಹಲವರು ಸಚಿವರು ತಾವೇ ಮುಂದಿನ ಸಿಎಂ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಹಾಗಾಗಿ ನಮ್ಮಲ್ಲಿ ಪ್ಲಾನ್ A , B ಯಾವುದು ಇಲ್ಲ ಡೈರೆಕ್ಟ್ ಆಗಿ C ಪ್ಲಾನ್ ಅನುಷ್ಠಾನಕ್ಕೆ ತರುತ್ತೇವೆ’ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ..

ಅಲ್ಲದೆ ಸಭೆಯಲ್ಲಿ ಕೇವಲ ರಾಜ್ಯದ ಬಗ್ಗೆ ಹಾಗೂ ಮುಂದಿನ ಚುನಾವಣೆಯ ಬಗ್ಗೆ ಮಾತುಕತೆ ನಡೆಸಿದ್ದೇವೆ ಅಷ್ಟೇ, ಈ ಸಭೆಗೂ, ಇಡಿಗೂ, ಮುಡಾ ಹಗರಣಕ್ಕೂ ಸಂಬಂಧವಿಲ್ಲ. ಸಿಎಂ ಜೊತೆ ಇಡೀ ಸಚಿವ ಸಂಪುಟ ಇದೆ, ಅವರನ್ನು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

Leave A Reply

Your email address will not be published.