R Ashok: ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಆರ್ ಅಶೋಕ್ ರಾಜಿನಾಮೆ?

Share the Article

R Ashok: ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣ ಆರೋಪ ಕೇಳಿಬಂದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ವಿರುದ್ಧ ಕೂಡ ಕಾಂಗ್ರೆಸ್ ಭೂಹಗರಣ ಆರೋಪ ಮಾಡಿ ರಾಜಿನಾಮೆ ಕೇಳಿತ್ತು. ಈ ಬೆನ್ನಲ್ಲೇ ಆರ್ ಅಶೋಕ್(R Ashok) ಅವರು ತಮ್ಮ ರಾಜಿನಾಮೆ ಕುರಿತು ಮಾತನಾಡಿದ್ದಾರೆ.

ಭೂಹಗರಣ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ತಿರುಗೇಟು ನೀಡಿದ್ದು, 4 ಜನ ಸಚಿವರು ಹೇಳಿದಂತೆ ಸಚಿವರಿಗೆ ಗೌರವ ಕೊಟ್ಟು ನಾನು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ಅದೇ ನೈತಿಕತೆಯಲ್ಲಿ ಸಿದ್ದರಾಮಯ್ಯ (Siddaramaiah) ರಾಜೀನಾಮೆಯನ್ನ 4 ಜ‌ನ ಮಂತ್ರಿಗಳು ಪಡೆಯಲಿ ಎಂದು ಹೇಳಿದ್ದಾರೆ. ಅಥವಾ ಪರಮೇಶ್ವರ್ (G Parameshwara) ಬಿಟ್ಟು ಉಳಿದ 3 ಜನ ಸಚಿವರು ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ಮೇಲಿನ ಪ್ರೀತಿ ಅನಾವರಣ ಮಾಡಲಿ ಅಂತ ವಿಪಕ್ಷ ನಾಯಕ ಆರ್.ಅಶೋಕ್ (R Ashoka) 4 ಜನ ಸಚಿವರಿಗೆ ಸವಾಲ್ ಹಾಕಿದ್ದಾರೆ.

ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ಅರಿಶಿನ-ಕುಂಕುಮದ ಮೂಲಕ ಭೂಮಿ ಬಂದಿದೆ. ಆದರೆ ನಾನು ಹಣ ಕೊಟ್ಟು ಭೂಮಿ ಖರೀದಿ ಮಾಡಿದ್ದೇನೆ ಎಂದರು. ಈ ಪ್ರಕರಣದ ಬಗ್ಗೆ ಆರೋಪ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್‌ನ ಕೇಂದ್ರ ಸರ್ಕಾರವೇ ನೇಮಿಸಿದ ರಾಜ್ಯಪಾಲ ಹಂಸರಾಜ್‌ ಭಾರಧ್ವಾಜ್‌ ಇದ್ದರು. ಅವರು ಕೂಡ ಈ ಪ್ರಕರಣವನ್ನು ತನಿಖೆಗೆ ವಹಿಸಿಲ್ಲ. ರಾಜ್ಯಪಾಲರು ಹಾಗೂ ನ್ಯಾಯಾಲಯವೇ ನಾನು ತಪ್ಪಿತಸ್ಥ ಅಲ್ಲ ಎಂದು ಅಭಿಪ್ರಾಯಪಟ್ಟರೆ, ಕಾಂಗ್ರೆಸ್‌ ಪಕ್ಷ ಮಾತ್ರ ಇದರಲ್ಲಿ ತೀರ್ಪು ನೀಡಲು ಮುಂದಾಗಿದೆ. ಅಂದರೆ ಕಾಂಗ್ರೆಸ್‌ ಪಕ್ಷ ತನ್ನನ್ನು ನ್ಯಾಯಾಲಯಕ್ಕಿಂತ ದೊಡ್ಡದು ಎಂದುಕೊಂಡಿದೆ ಎಂದು ವ್ಯಂಗ್ಯವಾಡಿದರು.

ಬಳಿಕ ಮಾತನಾಡಿದ ಅವರು ಲೊಟ್ಟೆಗೊಲ್ಲಹಳ್ಳಿ ಭೂಮಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ (Highcourt) ನನ್ನ ಪರ ತೀರ್ಪು ಕೊಟ್ಟಿದೆ. ಅದು ಬಿಡಿಎ ಜಾಗ ಅಲ್ಲ. ಬಿಡಿಎ ಈ ಸಂಬಂಧ ನನಗೆ NOC ಕೊಟ್ಟಿದೆ. ಮಾಲೀಕರ ರಾಮಸ್ವಾಮಿಗೆ ಅವರ ತಂದೆಯಿಂದ ಜಮೀನು ಬಂದಿದೆ. ನಿಯಮದ ಪ್ರಕಾರವೇ ನಾನು ಹಣ ಬಿಟ್ಟು ರಿಜಿಸ್ಟರ್ ಮಾಡಿಕೊಂಡಿದ್ದೇನೆ‌.

ಅಲ್ಲದೆ ನನ್ನ ಕೇಸ್ ಬೇರೆ ಸಿದ್ದರಾಮಯ್ಯ ಕೇಸ್ ಬೇರೆ. ಆದರೂ ನಾನು ಸಚಿವರ ಮಾತಿಗೆ ಒಪ್ಪಿ ನೈತಿಕತೆ ಹೊತ್ತು ರಾಜೀನಾಮೆ ಕೊಡುತ್ತೇನೆ. ಇದರಂತೆ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಸಚಿವರು ಪಡೆಯಬೇಕು. ಇಲ್ಲದೇ ಹೋದರೆ ಸಿಎಂ ಪರವಾಗಿ 3 ಜನ ಸಚಿವರಾದ್ರು ರಾಜೀನಾಮೆ ಕೊಡಲಿ ಅಂತ ಸವಾಲ್ ಹಾಕಿದ್ರು‌

Leave A Reply

Your email address will not be published.